ರಬಕವಿ ಬನಹಟ್ಟಿ: ‘ದೇಶಕ್ಕೆ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಂ ಅವರ ಕೊಡುಗೆ ಅಪಾರ. ಉಪ ಪ್ರಧಾನಿಯಾಗಿ, ರಕ್ಷಣೆ ಮತ್ತು ಕಾರ್ಮಿಕ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು. ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಶ್ರಮಿಸಿದ್ದರು’ ಎಂದು ರಬಕವಿ ನಗರದ ಮುಖಂಡ ಬಾಬು ಮಹಾಜನ ತಿಳಿಸಿದರು.

ರಬಕವಿ– ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಬಾಬು ಜಗಜೀವನ ರಾಂ ಅವರ 119ನೇ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬನಹಟ್ಟಿಯ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸುಧೀರ ನಡುವಿನಮನಿ ಮಾತನಾಡಿ, ‘ಬಾಬು ಜಗಜೀವನ ರಾಂ ಅವರು ಕೃಷಿ ಕ್ಷೇತ್ರದ ಹರಿಹಕಾರರಾಗಿದ್ದರು. ದೇಶದಲ್ಲಿ ಆಹಾರದ ಕೊರತೆಯ ಸಂದರ್ಭದಲ್ಲಿ ವೈಜ್ಞಾನಿಕ ಬೇಸಾಯ, ನೀರಾವರಿ ಮತ್ತು ಉತ್ತಮ ಬೀಜಗಳ ಬಳಕೆ ಪ್ರೋತ್ಸಾಹಿಸುವ ಮೂಲಕ ಹಾಲಿನ ಉತ್ಪಾದನೆಗೂ ಮಹತ್ವ ನೀಡಿದ್ದರು. ಸಮಾಜದ ಅಭಿವೃದ್ಧಿಗಾಗಿ ಅವರ ತತ್ವ, ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಗಿರೀಶ ಸ್ವಾದಿ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಸದಾಶಿವ ಕುಂಬಾರ, ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ ಆಲಗೂರ, ಸಮಾಜದ ಪ್ರಮುಖರಾದ ಬಾಬು ಕೆಳಗಿಮನಿ, ಮಾರುತಿ ಮಾದರ, ಚಂದ್ರು ಹರಿಜನ, ಸುಭಾಸ ನಡುವಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-19-223341036

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.