ರಬಕವಿ ಬನಹಟ್ಟಿ: ಇಲ್ಲಿನ ಸಿದ್ಧರಾಮೇಶ್ವರ ದೇವಸ್ಥಾನದ ಎದುರು ₹1.62 ಕೋಟಿ ಮೊತ್ತದ ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ಕೈಗೊಂಡು ನಾಲ್ಕೈದು ತಿಂಗಳಾದರೂ ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ.

ಭೂಮಿ ಪೂಜೆ ನಂತರ ಇದುವರೆಗೂ ಯಾವುದೇ ಅಧಿಕಾರಿ ಮತ್ತು ಗುತ್ತಿಗೆದಾರರು ಇತ್ತ ಕಡೆ ಬಂದಿಲ್ಲ. ಕಾರ್ಯಕ್ರಮ ನಡೆದ ಎರಡು ಮೂರು ದಿನಗಳಲ್ಲಿ ಇಲ್ಲಿದ್ದ ಎರಡು ಬೃಹತ್ ಆಲದ ಮರಗಳನ್ನು ಕಡಿಯಲಾಯಿತು. ಈ ಎರಡು ಮರಗಳು ಜನರಿಗೆ ಸಾಕಷ್ಟು ನೆರಳು ನೀಡುತ್ತಿದ್ದರೆ, ದಿನನಿತ್ಯ ನೂರಾರು ಪಕ್ಷಿಗಳಿಗೆ ಆಶ್ರಯದ ತಾಣವಾಗಿದ್ದವು. ಕಡಿದ ಆಲದ ಮರಗಳು ಮತ್ತೆ ಚಿಗುರುತ್ತಿವೆ, ಆದರೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಸದ್ಯ ಈ ಪ್ರದೇಶ ಕಸ ಹಾಕುವ ತಾಣವಾಗಿವೆ. ಇಲ್ಲಿ ಕಟ್ಟಡ ತ್ಯಾಜ್ಯವನ್ನೂ ಸಾಕಷ್ಟು ಪ್ರಮಾಣದಲ್ಲಿ ಹಾಕಲಾಗಿದೆ. ಕೆಲವರು ಕಸದ ರಾಶಿ ಮತ್ತು ಪ್ಲಾಸ್ಟಿಕ್ ಸುಡುತ್ತಾರೆ. ಮೂತ್ರ ವಿಸರ್ಜನೆಯ ತಾಣವೂ ಆಗಿದೆ. ಇವೆಲ್ಲವುಗಳಿಂದಾಗಿ ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ. ‘ನಿತ್ಯ ಶಾಲೆ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಬೆಳಗಿನ ಮತ್ತು ಸಂಜೆಯ ವಾಯು ವಿಹಾರಿಗಳಿಗೆ, ಇದೇ ಮಾರ್ಗವಾಗಿ ಸಂಚರಿಸುವ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಕೈಗೊಳ್ಳಬೇಕು’ ಎಂದು ಮಹಾಲಿಂಗ ಹೂಲಿ, ಗೌರಿ ಮಿಳ್ಳಿ, ಸಾವಿತ್ರಿ ಕಾಡದೇವರ, ಪಾರ್ವತಿ ಪೂಜಾರಿ, ಅಶ್ವಿನಿ ಪಿಟಗಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1437214931

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.