ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ರೈತ ಸದಾಶಿವ ಬಂಗಿ ಸಮಗ್ರ ಕೃಷಿಕಾರರು. ವಾಣಿಜ್ಯ ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ಧಾರೆ.

ಕೇವಲ ಇಪ್ಪತ್ತು ಗುಂಟೆ ಪ್ರದೇಶದಲ್ಲಿ 22ಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದು ವಿಶೇಷ ಸಾಧನೆ ಮಾಡಿದ್ದರು. ಈಗ ತಮ್ಮ ತೋಟದ ಮೂರುವರೆ ಎಕರೆ ಭೂ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆದು ಲಕ್ಷಾಂತರ ಲಾಭವನ್ನು ಮಾಡಿಕೊಂಡಿದ್ದಾರೆ.

‘ಬೆಳ್ಳುಳ್ಳಿ ಬೆಳೆಯನ್ನು ಬೆಳೆಯಬೇಕಾದರೆ ಮೊದಲು ಎರಡ್ಮೂರು ಬಾರಿ ಮಣ್ಣನ್ನು ಹದ ಮಾಡಿಕೊಳ್ಳಬೇಕಾಗುತ್ತದೆ. ಮೊದಲು ಕೊಟ್ಟಿಗೆ ಗೊಬ್ಬರ ಹಾಕಬೇಕಾಗುತ್ತದೆ. ನಂತರ ಕೋಳಿ, ಕುರಿ ಮತ್ತು ಕೊಟ್ಟಗೆ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಹಾಕಿ ಕಲಿಸಿದ ನಂತರ ಬೆಡ್ ನಿರ್ಮಾಣ. ಬೆಡ್ ನಿರ್ಮಾಣದ ನಂತರ ಸಾಲುಗಳನ್ನು ಹಾಕಿ ಬೀಜಗಳನ್ನು ನಾಟಿ ಮಾಡಲಾಗುತ್ತದೆ. ನಂತರ ಪ್ರತಿ 15 ದಿನಗಳಿಗೆ ಒಂದು ಬಾರಿ ಜೀವಾಮೃತವನ್ನು ನೀಡಲಾಗಿದೆ. ಮೂರು ತಿಂಗಳಲ್ಲಿ ಮೂರು ಬಾರಿ ಕಳೆಯನ್ನು ತೆಗೆಯಲಾಗಿದೆ. ಒಂದು ಎಕರೆಗೆ ಅಂದಾಜು ₹50 ಸಾವಿರಷ್ಟು ಖರ್ಚಾಗುತ್ತದೆ’ ಎನ್ನುತ್ತಾರೆ ರೈತ ಸದಾಶಿವ.

‘ಬೆಳ್ಳುಳ್ಳಿಯನ್ನು ಕೊಯ್ಲು ಮಾಡಿದ ನಂತರ ಅವುಗಳನ್ನು ಒಣಗಿಸುವುದು ಬಹಳಷ್ಟು ಮುಖ್ಯವಾಗಿದೆ. ಬೆಳ್ಳುಳ್ಳಿಯನ್ನು ಒಣಗಿಸುವ ಸಂದರ್ಭದಲ್ಲಿ ಬಳ್ಳೊಳ್ಳಿಯ ಗಡ್ಡೆಯ ಮೇಲೆ ತಪ್ಪಲನ್ನು ಹಾಕಿ ಒಣಗಿಸಬೇಕು. ಪ್ರತಿ ಮೂರು ದಿನಗಳಿಗೆ ಒಂದು ಬಾರಿ ಅವುಗಳನ್ನು ತಿರುವು ಮಾಡಿ ಹಾಕಬೇಕು. ಹತ್ತರಿಂದ ಹನ್ನೊಂದು ದಿನಗಳ ಕಾಲ ಒಣಗಿಸಿದ ನಂತರ ಗಡ್ಡೆಗಳನ್ನು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡುವುದು ಕೂಡ ಮುಖ್ಯ. ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟ ಬೆಳ್ಳುಳ್ಳಿಯು ಏಳೆಂಟು ತಿಂಗಳ ಕಾಲ ಬಾಳಿಕೆ ಬರುತ್ತದೆ’ ಎನ್ನುವ ಅಭಿಪ್ರಾಯ ಅವರದ್ದು.

ಮಾರುಕಟ್ಟೆಯಲ್ಲಿ ಬಳ್ಳೊಳ್ಳಿಗೆ ಈಗ ₹100 ರಿಂದ ₹125 ರವರೆಗೆ ಬೆಲೆ ಇದೆ. ಬಳ್ಳೊಳ್ಳಿಯನ್ನು ಬೆಳೆದ ನಂತರ ಅವುಗಳನ್ನು ಒಣಗಿಸುವ ಮತ್ತು ಸಂಗ್ರಹಿಸಿಡುವ ಕಾರ್ಯ ಬಹಳಷ್ಟು ಮಹತ್ವದ್ದಾಗಿದೆ
ಸದಾಶಿವ ಬಂಗಿ, ರೈತರು ಜಗದಾಳ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.