ರಬಕವಿ ಬನಹಟ್ಟಿ: ‘ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಸರ್ಕಾರಿ ಶಾಲೆ ಎಂಬ ಕೀಳರಿಮೆ ಬೇಡ. ಇಂದಿನ ದಿನಗಳಲ್ಲಿ ಸಮಾಜದ ಮಹತ್ವದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ ತಿಳಿಸಿದರು.

ಅವರು ಸೋಮವಾರ ಇಲ್ಲಿನ ಕೆಎಚ್ಡಿಸಿ ಕಾಲೊನಿಯಲ್ಲಿಯ ಪಿಎಂಶ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಶಿಕ್ಷಕಿ ಶೈಲಾ ಮಿರ್ಜೆ ಮಾತನಾಡಿ, ‘ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯ ಮೊದಲ ದಿನವೇ ಮಕ್ಕಳ ಉತ್ತಮ ಹಾಜರಾತಿ ಇದ್ದು, ಪುಸ್ತಕ ಮತ್ತು ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗಿದೆ. ಪಾಲಕರ ಸಭೆ ಕೂಡ ಕೈಗೊಳ್ಳಲಾಗಿದೆ’ ಎಂದರು.

ಆನಂದ ತೆಲಸಂಗ, ಸಂಜಯ ಹರಿಜನ, ಪ್ರಕಾಶ ನಾವಿ, ಅಶ್ವಿನಿ ಗೆದ್ದೆಪ್ಪನವರ, ಪ್ರಿಯಾಂಕಾ ಸಾಲಗುಡೆ, ಸ್ನೇಹಾ ಹಜಾರೆ, ನಸೀಮಾ ಝಾರೆ, ಬಿ.ವಿ.ತೆಗ್ಗಿ, ಎಚ್.ಜಿ.ಜೀರಂಕಳೆ, ಸಿ.ಬಿ. ಜೈನಾಪುರ, ಎಸ್.ಎಂ.ಕಿತ್ತೂರ, ಎಸ್.ಆರ್.ಹಿಪ್ಪಲಿ, ಬಿ.ವಿ.ಮಠಪತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-19-1397955628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.