ರಬಕವಿ ಬನಹಟ್ಟಿ: ಬನಹಟ್ಟಿಯಿಂದ ಜಗದಾಳ ಗ್ರಾಮಕ್ಕೆ ಮತ್ತು ಕೆಎಚ್ಡಿಸಿ, ಡೆಂಪೊ ರಸ್ತೆ ಮಾರ್ಗದ ಮೂಲಕ ಕೃಷ್ಣಾ ನದಿ, ಮದನಮಟ್ಟಿ, ಹನಗಂಡಿ ಗ್ರಾಮಕ್ಕೆ ತೆರಳುವ ಮಾರ್ಗಗಳು ಬೀದಿ ದೀಪಗಳಿಲ್ಲದೆ ರಾತ್ರಿಯಲ್ಲಿ ಕತ್ತಲೆಯಿಂದ ಆವರಿಸುತ್ತಿವೆ.

ಬೆಳಕು ನೀಡಬೇಕಾದ ವಿದ್ಯುತ್ ಕಂಬಗಳು ಜಗದಾಳ ರಸ್ತೆಯಲ್ಲಿ ಅಡ್ಡಲಾಗಿ ಮಲಗಿವೆ. ಸಂಬಂಧಪಟ್ಟ ಅಧಿಕಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಐದಾರು ತಿಂಗಳುಗಳಿಂದ ಹಾಗೇ ಉಳಿದುಕೊಂಡಿದೆ. ಇದರಿಂದ ನಿತ್ಯ ಇದೇ ಮಾರ್ಗವಾಗಿ ಸಂಚರಿಸುವ ಬಹಳಷ್ಟು ಜನರಿಗೆ ತೊಂದರೆಯಾಗಿದೆ.

ಬನಹಟ್ಟಿ ಜಗದಾಳ ಮಾರ್ಗದಲ್ಲಿ ಅಂದಾಜು 1 ಕಿ.ಮೀ ದೂರದವರೆಗೆ ಕಂಬಗಳನ್ನು ಅಳವಡಿಸಲಾಗಿದೆ. ಅದೇ ರೀತಿಯಾಗಿ ಡೆಂಪೊ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ.

ಈ ಎರಡು ಮಾರ್ಗಗಳಲ್ಲಿ ನಿತ್ಯ ನೂರಾರು ಜನರು ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಮತ್ತು ತಮ್ಮ ಮನೆಗಳಿಗೆ ತೆರಳುತ್ತಾರೆ. ಈ ಮಾರ್ಗದಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ತೊಂದರೆಯಾಗಿದೆ.

ಇಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳ ಎತ್ತರ ಕಡಿಮೆ ಇವೆ ಮತ್ತು ಚಿಕ್ಕದಾದ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಕಂಬಗಳು ಚಿಕ್ಕದಾಗಿದ್ದರಿಂದ ಬೃಹತ್ ವಾಹನಗಳ ಸಂಚಾರಕ್ಕೆ ತೊಂದರೆಯಾತ್ತದೆ. ರಸ್ತೆಯ ಬದಿಗೆ ಇವುಗಳನ್ನು ಅಳವಡಿಸಿದ್ದರಿಂದ ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆಗೂ ತೊಂದರೆಯಾಗಲಿದೆ. ಚಿಕ್ಕದಾದ ಎಲ್ಇಡಿ ಬಲ್ಬಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳಕು ಕೂಡಾ ಬರುವುದಿಲ್ಲ.

‘ಜಮಖಂಡಿ– ಕುಡಚಿ ರಾಜ್ಯ ಹೆದ್ದಾರಿಯ ಬದಿ ಅಳವಡಿಸಲಾದ ವಿದ್ಯುತ್ ಕಂಬಗಳನ್ನು ಮತ್ತು ಬಲ್ಬ್ಗಳನ್ನು ಇಲ್ಲಿಯೂ ಅಳವಡಿಸಿದರೆ ಅನುಕೂಲವಾಗುತ್ತಿತ್ತು. ಆದಷ್ಟು ಬೇಗ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯರಾದ ಶ್ವೇತಾ ಮಠದ, ಗೀತಾ ಬಿರಾದಾರ, ವೀಣಾ ಚನಾಳ, ಶಾಂತಾ ಗುಡ್ಲಿ, ಜ್ಯೋತಿ ಹನಗಂಡಿ, ಲತಾ ನುಚ್ಚಿ ಆಗ್ರಹಿಸಿದ್ದಾರೆ.

ಟೆಂಡರ್ ಪ್ರಕಾರ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ತಿಳಿಸಲಾಗಿತ್ತು. ಆದರೆ ಈಗ ಕಾಮಗಾರಿ ಮುಕ್ತಾಯ ಹಂತದಲ್ಲಿರುವುದರಿಂದ ಶೀಘ್ರ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ
ಸಿದ್ದು ಸವದಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.