ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರ ಆರಾಧನಾ ಮಹೋತ್ಸವ

Last Updated 24 ಆಗಸ್ಟ್ 2021, 16:20 IST
ಅಕ್ಷರ ಗಾತ್ರ

ಗುಳೇದಗುಡ್ಡ: ನಗರದದ ರಾವಜಿ ವಾಡಾದಲ್ಲಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಆರಂಭಗೊಂಡಿತು.

ಪಟ್ಟಣದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಉತ್ಸವ, ಅಲಂಕಾರ, ಅಭಿಷೇಕ, ಅಷ್ಟೋತ್ತರ, ಪ್ರವಚನ, ಪಲ್ಲಕ್ಕಿ ಸೇವೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ರಾಘವೇಂದ್ರಸ್ವಾಮಿ ಮಠದ ಅರ್ಚಕರಾದ ವೆಂಕಟೇಶ ಪರ್ವತೀಕರ, ಸಮರ್ಥ ಪರ್ವತೀಕರ, ಗುರುರಾಜ ಪರ್ವತೀಕರ, ಶ್ರೀನಿವಾಸ ಕುಲಕರ್ಣಿ ಅವರು ಶ್ರೀರಾಘವೇಂದ್ರ ಸ್ವಾಮಿಗಳ ರಜತ ಮೂರ್ತಿಯನ್ನು ವಿಶೇಷವಾಗಿ ಶೃಂಗಾರಗೊಳಿಸಿದ್ದರು.

ಡಾ. ಸುರೇಶ ಪರ್ವತೀಕರ, ಕಲ್ಯಾಣ ಮರಳಿ, ಬಸವರಾಜ ಚಿಲ್ಲಾಪೂರ, ಗುರುರಾಜ ಪರ್ವತೀಕರ, ವೆಂಕಟೇಶ ಕುಲಕರ್ಣಿ, ಡಾ.ವಿ.ಎನ್.ಡಾಣಾಕಶಿರೂರ, ಶ್ರೀಧರ ನರೆಗಲ್ಲ ಮತ್ತಿತರರು ಇದ್ದರು.

ರಬಕವಿ ಬನಹಟ್ಟಿ ವರದಿ: ಸ್ಥಳೀಯ ರಾಯರ ಮಠದಲ್ಲಿಯ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬ್ರಾಹ್ಮಣ ಸಮಾಜದವರು ರಾಘವೇಂದ್ರ ಸ್ವಾಮೀಜಿಯವರು ಅಷ್ಟೋತ್ತರ ನಾಮಾವಳಿಯನ್ನು ಪಠಿಸಿದರು.

ಸಮಾಜದ ಅಧ್ಯಕ್ಷ ಅನಿಲ ಶುಕ್ಲೆ, ಸುಭಾಸ ದೇಶಪಾಂಡೆ, ಶ್ರೀಧರ ಕುಲಕರ್ಣಿ, ಅರುಣ ಕುಲಕರ್ಣಿ, ಸಂಜೀವ ಕುರಂದವಾಡ, ವಿ.ಬಿ.ಕುಲಕರ್ಣಿ, ರಾಮಚಂದ್ರ ಬಾಪಟ ಇದ್ದರು.

ಶಿರೂರ (ರಾಂಪುರ) ವರದಿ: ಪಟ್ಟಣದಲ್ಲಿ ಮಂಗಳವಾರ ವಿಪ್ರ ಸಮಾಜದ ವತಿಯಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ವಿಷ್ಣು ಸಹಸ್ರನಾಮ, ರಾಘವೇಂದ್ರ ಅಷ್ಟೋತ್ತರ, ಮಹಾ ಮಂಗಳಾರತಿ ಇತ್ಯಾದಿ ಪೂಜಾ
ಕೈಂಕರ್ಯಗಳನ್ನು ನೆರವೇರಿಸಿ, ರಾಘವೇಂದ್ರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಪುರೋಹಿತ ವಸಂತಾಚಾರ ಕಡಿವಾಲ, ಆರ್.ಎನ್. ದೇಸಾಯಿ, ಸುರೇಶ ದೇಸಾಯಿ, ಎಸ್.ಎ. ದೇಸಾಯಿ, ಎಸ್.ಎ. ಇನಾಮದಾರ, ವೈ.ಜಿ.ಕುಲಕರ್ಣಿ, ಗಣಪತಿರಾವ ದೇಶಪಾಂಡೆ ಸೇರಿ ವಿಪ್ರ ಸಮಾಜದ ಪ್ರಮುಖರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು. ನಂತರ ಅನ್ನ ಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT