ಗುರುವಾರ , ಅಕ್ಟೋಬರ್ 17, 2019
22 °C

ಸೀಮಿಕೇರಿ: 27 ಮಿ.ಮೀ ಮಳೆ ದಾಖಲು

Published:
Updated:
Prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಗುರುವಾರ ಸಂಜೆ ಬಿರುಸಿನ ಮಳೆ ಬಿದ್ದಿದೆ. ಸಂಜೆ 6.30ರ ವೇಳೆಗೆ ತಾಲ್ಲೂಕಿನ ಸೀಮಿಕೇರಿಯಲ್ಲಿ 27 ಮಿಲಿಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಗದ್ದನಕೇರಿಯಲ್ಲಿ 19 ಮಿ.ಮೀ, ಬಾಗಲಕೋಟೆ ನಗರ 5.5 ಮೀಟರ್, ದೇವನಾಳ 8.5, ರಾಂಪುರ 12 ಮಿ.ಮೀ ಮಳೆ ಬಿದ್ದಿದೆ.

ಜಮಖಂಡಿ ತಾಲ್ಲೂಕಿನ ಮರೇಗುದ್ದಿಯಲ್ಲಿ 23 ಮಿ.ಮೀ, ಕಡಪಟ್ಟಿ, ಮೈಗೂರಿನಲ್ಲಿ 11, ಲಿಂಗನೂರಿನಲ್ಲಿ 16, ಮುಧೋಳ ನಗರದಲ್ಲಿ 5, ಶಿರೋಳದಲ್ಲಿ 18, ಬೀಳಗಿ ತಾಲ್ಲೂಕಿನ ತೆಗ್ಗಿಯಲ್ಲಿ 14, ಸಿದ್ದಾಪುರದಲ್ಲಿ 10.5 ಮಿ.ಮೀ ಮಳೆಯಾಗಿದೆ. ಬಾದಾಮಿ ತಾಲ್ಲೂಕಿನ ಸೂಳಿಕೇರಿಯಲ್ಲಿ 6.5 ಹಾಗೂ ಹೊಸೂರಿನಲ್ಲಿ 12 ಮಿ.ಮೀಟರ್ ಮಳೆ ದಾಖಲಾಗಿದೆ.

Post Comments (+)