ಬಾರದ ಮಳೆ, ಬಾಡುತ್ತಿವೆ ಬೆಳೆ

7
ಬಾದಾಮಿ: ಬರದ ಭೀತಿಯಲ್ಲಿ ತಾಲ್ಲೂಕಿನ ರೈತರು

ಬಾರದ ಮಳೆ, ಬಾಡುತ್ತಿವೆ ಬೆಳೆ

Published:
Updated:
Deccan Herald

ಬಾದಾಮಿ: ಮಳೆಯ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಬಾಡಲಾರಂಭಿಸಿವೆ. ಬರಗಾಲದ ಛಾಯೆ ಮೂಡಿ ಇದು ರೈತಾಪಿ ವರ್ಗದ ಆತಂಕ ಹೆಚ್ಚಿಸಿದೆ. 

ಜೂನ್ ತಿಂಗಳಲ್ಲಿ ಉತ್ತಮವಾಗಿ ಸುರಿದ ಮಳೆಯಿಂದ ಪ್ರೇರಣೆಗೊಂಡ ರೈತರು ಬಿತ್ತನೆ ಮಾಡಿ ಸಂಭ್ರಮಿಸಿದ್ದರು. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದ್ದು, ಮೋಡ ಸಾಂದ್ರಗೊಂಡರೂ ಹನಿಯುತ್ತಿಲ್ಲ. ಇದರಿಂದ ಬೆಳೆಗಳು ಒಣಗತೊಡಗಿವೆ. ಇನ್ನೊಂದೆಡೆ ನವಿಲುತೀರ್ಥ ಜಲಾಶಯದಲ್ಲಿ ನಿರೀಕ್ಷೆಯಷ್ಟು ನೀರು ಸಂಗ್ರಹವಾಗದೇ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಿಲ್ಲ. ಇದು ನೀರಾವರಿ ಪ್ರದೇಶದಲ್ಲಿನ ಬೆಳೆಗಳೂ ಒಣಗಲು ಕಾರಣವಾಗಿದೆ.

ತಾಲ್ಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಅಧಿಕ ಬಿತ್ತನೆಯಾಗಿದೆ. ಒಟ್ಟು 33,890 ಹೆಕ್ಟೇರ್ ಪ್ರದೆಶದಲ್ಲಿ ಹೈಬ್ರಿಡ್ ಜೋಳ, ಸಜ್ಜೆ, ಮೆಕ್ಕೆಜೋಳ, ಹೆಸರು, ತೊಗರಿ, ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆಯಾಗಿದೆ. ಮುಂಗಾರು ಕೈಕೊಟ್ಟ ಕಾರಣ ಬೆಳೆಗಳು ಬಾಡಲು ಆರಂಭಿಸಿವೆ. ಮೆಕ್ಕಜೋಳ, ಸೂರ್ಯಕಾಂತಿ ಬಿತ್ತನೆಯಾಗಿ ಎರಡು ತಿಂಗಳು ಗತಿಸಿವೆ. ತೇವಾಂಶದ ಕೊರತೆಯಿಂದ ಬೆಳೆ ಎತ್ತರ ಬೆಳೆದಿಲ್ಲ.

‘ ಹೋದ ವರ್ಸ ಮಳಿ ಒಂದೀಟು ಚೊಲೋ ಆಗಿತ್ರಿ ಆದರ ಈ ವರ್ಸ ಮಳೀನ ಆಗಲಿಲ್ಲ. ಮುಂಜಾನಿ ಸಂಜೀಕ ಮಳಿಯಪ್ಪ ನೆಲಕ್ಕ ನೀರು ಸಿಂಪಡಿಸಿ ಹೊಕ್ಕಾನ ನೆಲದಾಗ ಹಸಿ ಎಲ್ಲಾ ಆರಿ ಬೆಳಿ ಒಣಗಾಕ ಹತ್ಯಾವ್ರಿ . ವರ್ಸಾ ಹಿಂಗ ಆತೂ ರೈತ್ರು ಹಿಂಗಾದ್ರ ಬದುಕೂದು ಹೆಂಗರಿ ಎಂದು ರೈತ ಪಾಂಡಪ್ಪ ಮುಂದೇಲಿ ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ ಒಟ್ಟು 56.000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದೆ. ಜುಲೈ 31 ರವರೆಗೆ ನೀರಾವರಿ ಪ್ರದೇಶದಲ್ಲಿ ಒಟ್ಟು 18,150 ಹೆಕ್ಟೇರ್ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ ಒಟ್ಟು 33,890 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 52,040 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಕಾರ್ಯ ಮುಗಿದಿದೆ’ ಎಂದು ಸಹಾಯಕ ಕೃಷಿ ನಿರ್ದೆಶಕ ಡಿ.ಎಚ್, ನರಹಟ್ಟಿ ಹೇಳಿದರು.

ಮಳೆಯ ಕೊರತೆಯಿಂದ ತೇವಾಂಶ ಕಡಿಮೆಯಾಗಿ ಮುಂಗಾರು ಬೆಳೆಗಳು ಬಾಡಲು ಆರಂಬಿಸಿವೆ. ಬಾಡಿದ ಬೆಳೆಯ ಬಗ್ಗೆ ಗ್ರಾಮ ಸೇವಕರು ಸರ್ವೇ ಕೈಗೊಂಡು ಸಮಗ್ರ ವರದಿ ಕೊಡಲು ತಿಳಿಸಲಾಗಿದೆ ಎಂದು ಪತ್ರಿಕೆ ಸಂಪರ್ಕಿಸಿದಾಗ ಸಹಾಯಕ ಕೃಷಿ ನಿರ್ದೇಶಕ ಡಿ.ಎಚ್. ನರಹಟ್ಟಿ ಹೇಳಿದರು.

ಮಳಿ ಒಂದ ಲೆಕ್ಕಕ್ಕ ಹೋದ ವರ್ಸ ಬೇಸಿ ಆಗಿತ್ರಿ ಈ ವರ್ಸ ಮಳೀ ಆಗಲಾರದಕ್ಕ ಬೆಳಿ ಎಲ್ಲಾ ಬತ್ಯಾವ. ಬೆಳಿಗೆ ನೀರ ಹಾಸಬೇಂಕದ್ರ ಬೋರನ್ಯಗ ನೀರಿಲ್ಲ ಎಲ್ಲಾ ಬೆಳಿ ಬತ್ತಾಕಹತ್ಯಾವು. ಭೂಮಿಗೆ ಹಾಕಿದ ಬೀಜ ಗೊಬ್ಬರ ನಮ್ಮ ಶ್ರಮ ಎಲ್ಲಾ ಹಾಳಾಗಿ ರೈತರ ಸ್ಥಿತಿ ಚಿಂತಾಜನಕ ಐತ್ರಿ.
ಹನುಮಂತ ಪರೂತಿ, ಕೆಂದೂರ ಗ್ರಾಮದ ರೈತ

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !