ಬಾಗಲಕೋಟೆ: ‘ಸಿದ್ದರಾಮಯ್ಯ ನಂತರ ನೀವೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರಿಂದ ಹೇಳಿಸಿ. ಅದು ಬಿಟ್ಟು ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಮತ ನೀಡಿ ಎಂದು ಯಾಕೆ ಸುಳ್ಳು ಹೇಳಿಸುತ್ತಿದ್ದೀರಿ‘ ಎಂದು ಮಾಜಿ ಶಾಸಕ ರಾಜುಗೌಡ ಪ್ರಶ್ನಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ. ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಅವರ ಬೆಂಬಲಿಗರು ಕೇಳುತ್ತಿದ್ದಾರೆ‘ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ನೀವೇ ಮುಖ್ಯಮಂತ್ರಿ ಎಂದು ಹೇಳಿದರೆ ನಾವೂ ಖುಷಿ ಪಡುತ್ತೇವೆ. ನಮ್ಮನ್ನು ಪಕ್ಷದಿಂದ ಹೊರ ಹಾಕಿದರೂ ಚಿಂತೆಯಿಲ್ಲ. ನಿಮಗೆ ಮತ ಹಾಕಿ ಎಂದು ಹೇಳುತ್ತೇವೆ’ ಎಂದರು.

‘ಒಳಮೀಸಲಾತಿ ಪ್ರಮಾಣ ತಗ್ಗಿಸಿದಾಗ ಜಾರಕಿಹೊಳಿ ಏಕೆ ಮಾತನಾಡಲಿಲ್ಲ. ರಾಜಣ್ಣ ಅವರನ್ನು ಸಂಪುಟದಿಂದ ಬಿಟ್ಟಾಗ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಆದಾಗ ಏಕೆ ಮಾತನಾಡಲಿಲ್ಲ’ ಎಂದರು.

‘ಬಿಜೆಪಿ ಸರ್ಕಾರ ಹೆಚ್ಚಿಸಿದ್ದ ಮೀಸಲಾತಿಯನ್ನು ಉಳಿಸಿಕೊಳ್ಳದ ಕಾಂಗ್ರೆಸ್ಸಿಗರಿಗೆ ಪಾಠ ಕಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.