ರಾಂಪುರ: ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸ್ಥಳೀಯ ಬಸ್ ನಿಲ್ದಾಣದ ಜಾಗ ಅತಿಕ್ರಮಣ ತೆರವು ಸಮಸ್ಯೆಗೆ ಈ ಬಾರಿಯಾದರೂ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಇತ್ತೀಚಿಗೆ ಈ ಸಂಬಂಧ ಬಾಗಲಕೋಟೆಯ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಅತಿಕ್ರಮಣ ಮಾಡಿರುವ 31 ಜನರಿಗೆ ಜಾಗೆ ತೆರವುಗೊಳಿಸುವಂತೆ ಸೂಚಿಸಿ ಮೂರು ನೋಟಿಸ್ ನೀಡಲಾಗಿತ್ತು. ಆದರೆ, ಈಗಲೂ ಯಾವುದೇ ಮಳಿಗೆ, ಅಂಗಡಿಗಳವರು ಜಾಗ ಖಾಲಿ ಮಾಡಿಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ಪುನರ್ವಸತಿ ಇಲಾಖೆ ಪೊಲೀಸ್ ಬಂದೋಬಸ್ತ್ ಪಡೆದು ತೆರವು ಕಾರ್ಯಾಚರಣೆಗೆ ಮುಂದಾಗಲು ಸಜ್ಜಾಗಿದೆ. ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಕೋರಿ ಪುನರ್ವಸತಿ ಇಲಾಖೆ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

2021ರಲ್ಲಿಯೇ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆ ರಾಂಪುರ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ರಾಂಪುರ ಪುನರ್ವಸತಿ ಕೇಂದ್ರದಲ್ಲಿ 1 ಎಕರೆ 11 ಗುಂಟೆ ಜಾಗ ಹಸ್ತಾಂತರಿಸಿದೆ.

ಆ ಜಾಗದಲ್ಲಿ ಅತಿಕ್ರಮಣವಾಗಿ ಅನೇಕ ಜನ ಅಂಗಡಿ, ಮಳಿಗೆ ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದು, ಅವರನ್ನು ತೆರವುಗೊಳಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪುನರ್ವಸತಿ ಇಲಾಖೆಗೆ ಕೋರಿದ್ದರು. ಈ ಸಂಬಂಧ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದಲೂ ಅತಿಕ್ರಮಣದಾರರಿಗೆ ಅನೇಕ ಬಾರಿ ತಿಳಿವಳಿಕೆ ಪತ್ರ ನೀಡಿದ್ದರೂ ಸಮಸ್ಯೆ ಪರಿಹಾರವಾಗಲಿಲ್ಲ.

ಅತಿಕ್ರಮಣ ತೆರವುಗೊಳಿಸುವಂತೆ ಕೋರಿ ಸಾರ್ವಜನಿಕರೊಬ್ಬರು ಇತ್ತೀಚೆಗೆ ಬಾಗಲಕೋಟೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರಿಂದಾಗಿ ಈ ಸಮಸ್ಯೆ ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಸೂಚಿಸಿದ ಹಿನ್ನೆಲೆಯಲ್ಲಿ ತೆರವುಗೊಳಿಸುವ ಪ್ರಕ್ರಿಯೆ ಮತ್ತೆ ಮನ್ನಲೆಗೆ ಬಂದಿದೆ.

ಸಂತ್ರಸ್ತರಾಗಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಇದುವೇ ನಮ್ಮ ಜೀವನಾಧಾರ. ಜಾಗಾ ಖಾಲಿ ಮಾಡು ಅಂದರೆ ಎಲ್ಲಿಗೆ ಹೋಗಬೇಕು. ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ಅಂಗಡಿಕಾರ ಅರುಣ ಹಿರೇಮಠ ಮನವಿ ಮಾಡಿದರು.

ಬಸ್ ನಿಲ್ದಾಣ ಜಾಗದ ಅತಿಕ್ರಮಣ ತೆರವು ಕಾರ್ಯಾಚರಣೆ ಶೀಘ್ರದಲ್ಲೇ ನಡೆಯಲಿದೆ. ಅಲ್ಲಿರುವ ಅಂಗಡಿ, ಮಳಿಗೆಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಹೆಸ್ಕಾಂಗೆ ಕೋರಲಾಗಿದೆ. ಆ ಕೆಲಸ ಮುಗಿದ ತಕ್ಷಣ ದಿನಾಂಕ ನಿಗದಿಯಾಗಲಿದೆ
ಸುನೀಲ ದೊಡಮನಿ, ಪುನರ್ವಸತಿ ಅಧಿಕಾರಿ, ಕೃ.ಮೇ.ಯೋ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.