ರಾಂಪುರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಅಗತ್ಯ ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದು ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚನ್ನಕೇಶವ ಹೇಳಿದರು.

ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದ ರುದ್ರಭೂಮಿಯಲ್ಲಿ ಅಳವಡಿಸಿದ ಶವದಹನ ಪೆಟ್ಟಿಗೆ (ಸಿಲಿಕಾನ್ ಛೇಂಬರ್) ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಾದ್ಯಂತ ಅನೇಕ ರುದ್ರಭೂಮಿಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಗಿದೆ. ಮರಣ ಹೊಂದಿದ ವ್ಯಕ್ತಿಯ ಶವ ಸಂಸ್ಕಾರವನ್ನು ವ್ಯವಸ್ಥಿತ ಮತ್ತು ಗೌರವಯುತವಾಗಿ ನೆರವೇರಿಸಲು ಮಾನವೀಯ ಉದ್ದೇಶದಿಂದ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ’ ಎಂದರು.

‘ಕಾರ್ಯಕ್ರಮದ ಅನ್ವಯ ಬಾಗಲಕೋಟೆ ಜಿಲ್ಲೆಯ 10ಕ್ಕೂ ಹೆಚ್ಚು ರುದ್ರಭೂಮಿಗಳಲ್ಲಿ ಸಿಲಿಕಾನ್ ಛೇಂಬರ್ ಅಳವಡಿಸಲಾಗಿದೆ. 3–4 ರುದ್ರಭೂಮಿಗಳಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಶೇಖರಯ್ಯಸ್ವಾಮಿ ಘಂಟಿಮಠ, ನೀಲಪ್ಪ ಪೆಟ್ಲೂರ, ತಿಮ್ಮಣ್ಣ ಸನ್ನಪ್ಪನವರ, ಶಂಕರ ಕುದರಿ, ಹನಮಂತ ಸನ್ನಪ್ಪನವರ, ಅಶೋಕ ದಾಸಪ್ಪನವರ, ಮುತ್ತಪ್ಪ ಬಾಳಕ್ಕನವರ, ಮುತ್ತುರಾಜ ಅರಕೇರಿ, ರವಿ ಅರಿಷಿಣಗೋಡಿ, ನೀಲಪ್ಪ ಬಾಳಕ್ಕನವರ, ನಿಂಗಪ್ಪ ಹುಡೇದಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-19-1889164907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.