ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಿಂಗಪ್ಪ ಆರೇನಾಡ ಹಾಗೂ ಉಪಾಧ್ಯಕ್ಷರಾಗಿ ಯಮನಪ್ಪ ಚಂದಪ್ಪನವರ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಚಿನ್ನಪ್ಪ ಪೂಜೇರಿ, ಉಪಾಧ್ಯಕ್ಷ ಶಿವಯ್ಯಾ ಮೆಟಗುಡ್ಡ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳ ಆಯ್ಕೆಗೆ ಸಂಘದ ಸಭಾಭವನದಲ್ಲಿ ಈಚೆಗೆ ಚುನಾವಣೆ ನಡೆಯಿತು.

ಎರಡೂ ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಕೆ. ಸಾರವಾಡ ಘೋಷಿಸಿದರು. ಐದು ವರ್ಷದ ಅಧಿಕಾರ ಅವಧಿಯಲ್ಲಿ ಎರಡುವರೆ ವರ್ಷ ಮುಗಿದಿದ್ದು, ಬಾಕಿ ಉಳಿದ ಆಡಳಿತ ಮಂಡಳಿ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾದ ಚಿನ್ನಪ್ಪ ಪೂಜೇರಿ, ಶಿವಯ್ಯಾ ಮೆಟಗುಡ್ಡ, ಗಿರೀಶ ಶಿರೋಳ, ಪರಮಾನಂದ ಸನಹಟ್ಟಿ, ಶಂಕರ ಆರೇನಾಡ, ರುಕ್ಮವ್ವ ಲಾಗದವರ, ಲಕ್ಷ್ಮೀ ಹುನ್ನೂರ, ಸಂತಪ್ಪ ಮಲಾವಡಿ, ಭೀಮವ್ವ ನ್ಯಾಮಗೌಡ, ಹನಮಂತ ದೊಡಹಟ್ಟಿ, ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಹಿಕಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-19-1573956565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.