ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯನೇಗಲಿ ಪಿಕೆಪಿಎಸ್: ಸಂಗಪ್ಪ ಬಳಿಗಾರ ಅಧ್ಯಕ್ಷ

Last Updated 22 ಅಕ್ಟೋಬರ್ 2020, 16:27 IST
ಅಕ್ಷರ ಗಾತ್ರ

ರಾಂಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮೀಪದ ನಾಯನೇಗಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರಥಮ ಅಧ್ಯಕ್ಷರಾಗಿ ಸಂಗಪ್ಪ ಸಿದ್ದಪ್ಪ ಬಳಿಗಾರ, ಉಪಾಧ್ಯಕ್ಷರಾಗಿ ಸಂಗಪ್ಪ ಚಲವಾದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಪ್ರಥಮ ಆಡಳಿತ ಮಂಡಳಿಯ ಸದಸ್ಯ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದು ಈಗ ಅಧ್ಯಕ್ಷ-ಉಪಾಧ್ಯಕ್ಷರನ್ನೂ ಅವಿರೋಧವಾಗಿ ಆಯ್ಕೆ ನಡೆದಿದೆ. ಸರ್ವ ಸದಸ್ಯರು ಒಗ್ಗೂಡಿ ಚುನಾವಣಾಧಿಕಾರಿಯಾಗಿ ಬಂದಿದ್ದ ಸಹಕಾರ ಇಲಾಖೆಯ ಎಸ್.ಕೆ. ಮೂಗನೂರ ಅವರ ಸಮ್ಮುಖದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಬಳಿಗಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಚಲವಾದಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ಹನಮಂತ ಚಿತ್ತರಗಿ, ಸಂಗಪ್ಪ ಕೋರಿ, ಮಲ್ಲಪ್ಪ ಹೆಬ್ಬಾಳ, ಡಾ. ಮಹಾಲಿಂಗಪ್ಪ ಅಂಗಡಿ, ಈರಬಸಪ್ಪಗೌಡ ಗೌಡರ, ಲಕ್ಷ್ಮೀಬಾಯಿ ಗೌಡರ, ಶಾಂಭವಿ ಬೆನಕನವಾರಿ, ಗುರುಲಿಂಗಯ್ಯ ಕಂಬಾಳಿಮಠ, ಬಸನಗೌಡ ಹೊಸಗೌಡರ, ಸಿದ್ದಪ್ಪ ಕಡೂರ ಹಾಗೂ ಕಾರ್ಯದರ್ಶಿ ಮನೋಹರ ಕೋಟಿ ಉಪಸ್ಥಿತರಿದ್ದರು.

ಸಂಘದ ಏಳಿಗೆಗೆ ಶ್ರಮಿಸುವೆ: ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಸಂಘದ ಹಾಗೂ ರೈತರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT