‘ಶಿಲ್ಪಕಲಾವಿದರಿಗೆ ಶಿಲೆಯ ಗುಣ ಗೊತ್ತಿರಲಿ’

7

‘ಶಿಲ್ಪಕಲಾವಿದರಿಗೆ ಶಿಲೆಯ ಗುಣ ಗೊತ್ತಿರಲಿ’

Published:
Updated:
Deccan Herald

ಬಾದಾಮಿ: ಶಿಲ್ಪಕ್ಕೆ ಪರಿಪೂರ್ಣತೆ ಮತ್ತು ಸೃಜನಶೀಲ ಚಲನಶಕ್ತಿ ಇರುತ್ತದೆ. ಶಿಲ್ಪಿಯಾದವನು ಕಲ್ಲಿನ ಗುಣ ಅರಿತು ಕಲಾ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಇತಿಹಾಸ ಸಂಶೋಧಕ ಡಾ.ಎಸ್.ಐ.ಪತ್ತಾರ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪ ಮತ್ತು ಚಿತ್ರಕಲಾ ಕೇಂದ್ರದಲ್ಲಿ ರಾಜ್ಯ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಶಿಲ್ಪಕಲಾವಿದ ನಟರಾಜ್ ಶಿಲ್ಪಿ ಅವರ ‘ಮಾತರಂ’ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಾಲುಕ್ಯರ ಕಾಲದ ಶಿಲ್ಪಿಗಳು ಕಲ್ಲು ಬಂಡೆ ಮತ್ತು ಮರಳು ಶಿಲೆಯಲ್ಲಿ ಮೂರ್ತಿಗಳನ್ನು ಚಿತ್ರಿಸುತ್ತಿದ್ದರು. ಯುವಶಿಲ್ಪಿ ನಟರಾಜ್ ರೂಪಿಸಿದ ಶಿಲ್ಪಗಳು ಸೃಜನಶೀಲತೆಯಿಂದ ಕೂಡಿವೆ. ಕಲಾಕೃತಿಗಳು ಸಹೃದಯರ ಮನಸ್ಸು ಅರಳಿಸುವಂತಿವೆ. ಫೈಬರ್, ಶಿಲೆ ಮತ್ತು ಲೋಹದ ಶಿಲ್ಪಗಳನ್ನು ನಟರಾಜ್ ಸೊಗಸಾಗಿ ಬಿಡಿಸಿದ್ದಾರೆ ಎಂದು ಶ್ಲಾಘಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಕೇಂದ್ರದ ಮುಖ್ಯಸ್ಥ ಡಾ.ಕೃಷ್ಣ ಕಟ್ಟಿ ಮಾತನಾಡಿ, ಶಿಲ್ಪಕಲಾ ಶಾಲೆಯಲ್ಲಿ ತರಬೇತಿ ಪಡೆದ ನಂತರ ಕಲಾವಿದರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಶಿಲ್ಪಕಲಾ ಅಕಾಡೆಮಿ ಸದಸ್ಯರಾದ ವಿಠ್ಠಲ ಬಡಿಗೇರ, ಬಸವರಾಜ ಕಮ್ಮಾರ ಇದ್ದರು. ಡಾ.ಎನ್.ಎಂ.ಅಂಗಡಿ ಸ್ವಾಗತಿಸಿದರು. ಡಾ. ಯಾದಪ್ಪ ಪರದೇಶಿ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !