ಬುಧವಾರ, ಆಗಸ್ಟ್ 5, 2020
22 °C

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ: ನೇಕಾರನ ಪುತ್ರ ಚೇತನ್ ಜಿಲ್ಲೆಗೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಾಗಲಕೋಟೆ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 97.5 ಅಂಕಗಳಿಸಿರುವ ಬನಹಟ್ಟಿಯ ಎಸ್‌ಅರ್‌ಎ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚೇತನ್ ಕಾಡಪ್ಪ ಸಿದ್ದಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಚೇತನ್ ಸಿದ್ದಾಪುರ ಕನ್ನಡ ವಿಷಯದಲ್ಲಿ 100ಕ್ಕೆ 99 ಅಂಕ, ಇಂಗ್ಲಿಷ್ 90, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 98  ಗಣಿತ 99, ಜೀವಶಾಸ್ತ್ರ ವಿಷಯದಲ್ಲಿ 100 ಅಂಕ ಪಡೆದಿದ್ದಾರೆ.

ತಂದೆ ಕಾಡಪ್ಪ ನೇಕಾರಿಕೆಯನ್ನು ವೃತ್ತಿ ಮಾಡುತ್ತಾರೆ. ಚೇತನ್ ಕೂಡಾ ಬಿಡುವಿನ ಸಮಯದಲ್ಲಿ ನೇಯ್ಗೆ ಮಾಡುತ್ತಾರೆ. 

ತಗಡಿನ ಮೇಲ್ಛಾವಣಿಯ ಮನೆಯಲ್ಲಿ ಮಗ್ಗದ ಸಪ್ಪಳದಲ್ಲಿ ಓದಲಾಗದೆ ನಿತ್ಯ ಕಾಲೇಜಿನಲ್ಲಿ ಸಂಜೆ ಐದು ಗಂಟೆಯವರೆಗೆ ಓದುತ್ತಿದ್ದೆ ಎಂದು ಚೇತನ್ ಹೇಳಿದರು. 

ಮಗನ ಸಾಧನೆಗೆ ಕಾಲೇಜಿನ ಉಪನ್ಯಾಸಕರ ಸಹಾಯ ಸಹಕಾರ ಅತಿ ಮುಖ್ಯವಾಗಿದೆ ಎಂಬುದು ತಾಯಿ ವಿಜಯಲಕ್ಷ್ಮಿ ಅಭಿಮತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು