ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಭ್ರಮದಿಂದ ನಡೆದ ಬಸವಾದಿ ಶಿವಶರಣರ ವಚನ ಗ್ರಂಥಗಳ ಅಡ್ಡಪಲ್ಲಕ್ಕಿ ಮೆರವಣಿಗೆ

Published 5 ಸೆಪ್ಟೆಂಬರ್ 2024, 16:05 IST
Last Updated 5 ಸೆಪ್ಟೆಂಬರ್ 2024, 16:05 IST
ಅಕ್ಷರ ಗಾತ್ರ

ಗುಡೂರ ಎಸ್ಸಿ(ಅಮೀನಗಡ): ಶ್ರಾವಣದ ಮಾಸದ ಮುಕ್ತಾಯದ ಹಿನ್ನೆಲೆಯಲ್ಲಿ ಶರಣ ಚರಿತಾಮೃತದ ಮಹಾಮಂಗಲೋತ್ಸವ ಹಾಗೂ ಬಸವಾದಿ ಶಿವಶರಣರ ವಚನ ಗ್ರಂಥಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಗುರುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲೋತ್ಸವ ಹಾಗೂ ಬಸವಾದಿ ಶಿವಶರಣರ ವಚನ ಗ್ರಂಥಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸಾಂಪ್ರದಾಯಿಕ ಸಕಲ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಮೆರವಣಿಗೆ ಮೈಸೂರು ವಿಜಯ ಮಹಾಂತೇಶ್ವರ ಕೃಪಾಪೋಷಿತ ರೋಣದ ಸಂಗನಬಸವ ಅನುಭವ ಮಂಟಪದಿಂದ ಹೊರಟು ಅಕ್ಕಮಹಾದೇವಿ ದೇವಸ್ಥಾನ , ಹುಲ್ಲೇಶ್ವರ ದೇವಸ್ಥಾನ, ಹುಣಸಿಕಟ್ಟೆ, ಸಂತೆ ಮಾರುಕಟ್ಟೆ, ಪ್ಯಾಟಿ ಬಸವೇಶ್ವರ ದೇವಸ್ಥಾನ ಮೂಲಕ ಸಾಗಿತು.

ಗುರುಮಹಾಂತ ಸ್ವಾಮೀಜಿ, ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ರೋಣದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಮ್ಯಾಗೇರಿ,ಅಶೋಕ ಗಂಜಿಹಾಳ, ಕಾಂತಪ್ಪ ರಾಜೂರ, ಚೋಳಯ್ಯ ಸಾಲಿಮಠ, ಮಹೇಶ ಜಡರಾಮಕುಂಟಿ,ರಾಜಶೇಖರ ಪಾಟೀಲ, ವೀರಭದ್ರಪ್ಪ ಗಂಜಿಹಾಳ, ದೊಡ್ಡಬಸಯ್ಯ ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಲ ವಿಜಯ ರೋಣದ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT