ಶಿರೂರ (ರಾಂಪುರ): ಪಟ್ಟಣದಲ್ಲಿ ಶನಿವಾರ ಜರುಗಿದ ಎರಡು ವಿಭಾಗದ ಬಂಡಿ ಓಟದ ಸ್ಪರ್ಧೆಯಲ್ಲಿ ಕಾಶಿನಕುಂಟಿ ಹಾಗೂ ಮತ್ತಿಕಟ್ಟಿ ಎತ್ತುಗಳು ಪ್ರಥಮ ಬಹುಮಾನ ಪಡೆದುಕೊಂಡವು.

ಒಂದು ಎತ್ತು ಹಾಗೂ ಒಂದು ಹೋರಿ ಜೋಡಿಗಳ ವಿಭಾಗದ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕಾಶಿನಕುಂಟಿಯ ಶಿವನಗೌಡ ಪಾಟೀಲ ಅವರ ಎತ್ತು ಪ್ರಥಮ ಸ್ಥಾನ ಪಡೆದರೆ, ಹುನಗುಂದ ತಾಲ್ಲೂಕಿನ ಕುಣಿಬೆಂಚಿಯ ಮುತ್ತಪ್ಪ ಗಣಿ ಅವರ ಎತ್ತು ದ್ವಿತೀಯ ಮತ್ತು ಶಿರೂರಿನ ಮನೋಜ ಗಾಳಿ ಎತ್ತುಗಳು ತೃತೀಯ ಬಹುಮಾನ ಪಡೆದವು.

ಒಂದು ಕುದುರೆ ಮತ್ತು ಒಂದು ಹೋರಿ ಜೋಡಿ ವಿಭಾಗದ ಸ್ಪರ್ಧೆಯಲ್ಲಿ ಬಾದಾಮಿ ತಾಲ್ಲೂಕಿನ ಮತ್ತಿಕಟ್ಟಿಯ ಹಸನ್ ಡೋಂಗ್ರಿ ಅವರ ಕುದುರೆ-ಹೋರಿ ಜೋಡಿ ಪ್ರಥಮ ಬಹುಮಾನ ಪಡೆದರೆ, ಶಿರೂರಿನ ಮನೋಜ ಗಾಳಿ ಅವರ ಕುದುರೆ-ಹೋರಿ ಜೋಡಿಗಳು ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡವು.

ದುರ್ಗಾದೇವಿ ಹಾಗೂ ದ್ಯಾಮವ್ವದೇವಿ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಬಂಡಿ ಓಟದ ಸ್ಪರ್ಧೆಗೆ ಬೆಳಿಗ್ಗೆ ಶಿವಯೋಗಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹಾಗೂ ಚಿನ್ಮಯಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು.

ಸಿದ್ದಪ್ಪ ಕೋಟಿಕಲ್, ರಂಗಪ್ಪ ಮಳ್ಳಿ, ಸಿದ್ದಪ್ಪ ಹಂಡರಗಲ್, ರಾಮನಗೌಡ ಮಾಚಾ, ಸಿದ್ದಪ್ಪ ಗಾಳಿ, ಹಣಮಂತ ಆಡಿನ, ಸುರೇಶ ರಾಜೂರ, ಜಗದೀಶ ದೇಸಾನಿ, ನೀಲಪ್ಪ ಕೋಟಿಕಲ್, ಎಸ್.ಎಫ್. ಬಾರಡ್ಡಿ, ಎಸ್.ಬಿ. ಮಾಚಾ, ಶ್ರೀಶೈಲ ಮಲಘಾಣ, ಸಂಜಯ ನಡುವಿನಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-1356103487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.