ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಜಯಂತಿ: ಶೋಭಾಯಾತ್ರೆ

ನೂರಾರು ಸಂಖ್ಯೆಯಲ್ಲಿ ಯುವಕರು ಭಾಗಿ
Last Updated 28 ಮಾರ್ಚ್ 2022, 1:32 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದಲ್ಲಿ ಎಲ್ಲ ಹಿಂದೂ ಸಂಘಟನೆಗಳ ವತಿಯಿಂದ ಶಿವಾಜಿ ಜಯಂತಿ ಅಂಗವಾಗಿ ಗುಳೇದಗುಡ್ಡ ಹರದೊಳ್ಳಿ ಹನಮಂತ ದೇವರ ದೇವಸ್ಥಾನದಿಂದ ಮಧ್ಯಾಹ್ನ ಬೃಹತ್ ಶೋಭಾಯಾತ್ರೆ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿದ್ದರು. ಕೇಸರಿ ಶಾಲು, ಕೇಸರಿ ಧ್ವಜ ವಿಶೇಷ ಗಮನಸೆಳೆದವು. ಶಿವಾಜಿಯ ನಾಮ ಹೇಳುವ ಜಯಘೋಷದೊಂದಿಗೆ ಯುವಕರು ಹಿಂದೂ ದೇಶದ ಏಕತೆಯ ಹರ್ಷೋದ್ಘಾರಗಳು ಒಗ್ಗಟ್ಟನ್ನು ಪ್ರದರ್ಶಿಸಿದವು.

ಹರದೊಳ್ಳಿ ಹನುಮಂತದೇವರ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ಭಂಡಾರಿ ಕಾಲೇಜು ಸರ್ಕಲ್, ಪವಾರಕ್ರಾಸ್, ಝಳಕಿಗಂಟಿ, ಪುರಸಭೆ, ಕಂಠಿಪೇಟೆ ಮಾರ್ಗವಾಗಿ ಪಟ್ಟಣದ ಗಚ್ಚಿನಕಟ್ಟಿಗೆ ಬಂದು ತಲುಪಿತು.

ಮಾರ್ಗದುದ್ದಕ್ಕೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಹೆಣ್ಣುಮಕ್ಕಳು ದೀಪದಾರತಿ ಎತ್ತಿ ಗೌರವ ಸೂಚಿಸಿದರು. ಕೆಸರಿ ಗುಲಾಲು ಪರಸ್ಪರ ಎರಚಾಡುವ ದೃಶ್ಯಗಳು ಹಬ್ಬದ ವಾತಾವರಣವನ್ನುಂಟು ಮಾಡಿದವು. ಶೋಭಾಯಾತ್ರೆಯಲ್ಲಿ ಡಾ. ಪುನೀತ್‌ ರಾಜ್‌ಕುಮಾರ ಅವರ ಭಾವಚಿತ್ರದ ನೋಡುಗರ ಗಮನ ಸೆಳೆಯಿತು.

ಶೋಭಾಯಾತ್ರೆ ಬರುವ ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ ಕಟ್ಟಿದ ಕೇಸರಿ ಧ್ವಜಗಳು ರಾತ್ರಿಯಿಂದಲೇ ರಾರಾಜಿಸಿದವು ಹಾಗೂ ಮೆರವಣಿಗೆಯುದ್ದಕ್ಕೂ ಜೈ ಶಿವಾಜಿ ಜೈ ಭವಾನಿ, ಜೈ ಭಜರಂಗಿ ಘೋಷಣೆಗಳು ಮೊಳಗಿದವು.

ಮಕ್ಕಳಿಂದ ವೇಷಭೂಷಣ: ಛತ್ರಪತಿ ಶಿವಾಜಿಯ ಮೂರ್ತಿ ಮೆರವಣಿಗೆಯಲ್ಲಿ ಚಿಕ್ಕ ಮಕ್ಕಳಿಂದ ಶ್ರೀರಾಮ, ಕಿತ್ತೂರ ರಾಣಿ ಚನ್ನಮ್ಮ, ಒನಕೆ ಓಬವ್ವ, ಭಗತಸಿಂಗ್ ಸೇರಿದಂತೆ ವಿವಿಧ ಮಹಾಪುರುಷರ ವೇಷಭೂಷಣದಲ್ಲಿ ಜನರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT