ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಯೋಗ ಮಂದಿರ: ಬಾಲಕಿ ಸೇರಿ ಒಂದೇ ಕುಟುಂಬದ ಮೂವರು ನೀರುಪಾಲು

Last Updated 22 ಆಗಸ್ಟ್ 2021, 11:52 IST
ಅಕ್ಷರ ಗಾತ್ರ

ಬಾಗಲಕೋಟೆ: ದೇವರ ದರ್ಶನಕ್ಕೆ ಬಂದವರು ನದಿಯಲ್ಲಿ‌ ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದ ಬಳಿ ನಡೆದಿದೆ.

ವಿಶ್ವನಾಥ್ ಮಾವಿನ ಮರದ (40), ಪತ್ನಿ ಶ್ರಿದೇವಿ ಮಾವಿನಮರದ (32) ಹಾಗೂ ಮಗಳು ನಂದಿನಿ (12) ಮೃತರು.

ಇವರು ಮೂಲತಃ ಗುಳೇದಗುಡ್ಡ ತಾಲ್ಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದರು.

ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು. ನಂತರ ಶಿವಯೋಗ ಮಂದಿರಕ್ಕೆ ತೆರಳಿದ್ದರು. ಅಲ್ಲಿ ಉಪಹಾರ ಸೇವಿಸಲು ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಊಟ ಮಾಡಿ ನಂದಿನಿ ಮಾವಿನಮರದ ನದಿಯಲ್ಲಿ ಕೈ ತೊಳೆಯಲು ಹೋಗಿ, ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನ ರಕ್ಷಿಸಲು ವಿಶ್ವನಾಥ್ ಹಾಗೂ ಶ್ರೀದೇವಿ ದಂಪತಿ ನೀರಿಗೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಿ ಶ್ರಿದೇವಿ ಅವರ ಶವ ಹೊರಕ್ಕೆ ತೆಗೆಯಲಾಗಿದ್ದು, ಆದರೆ ವಿಶ್ವನಾಥ್ ಹಾಗೂ‌ ಮಗಳು ನಂದಿನಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಬಾದಾಮಿ ಪಿ.ಎಸ್.ಐ ಭೇಟಿ‌ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT