ಶನಿವಾರ, ಜುಲೈ 24, 2021
28 °C
ಕ್ಷೇತ್ರದಲ್ಲಿ ಎರಡು ದಿನ ವಾಸ್ತವ್ಯ: ಕೋವಿಡ್-19 ಪರಿಹಾರ ಕ್ರಮಗಳ ಪರಿಶೀಲನೆ

ಬಾದಾಮಿಗೆ ನಾಳೆ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೋವಿಡ್–19 ಲಾಕ್‌ಡೌನ್‌ ನಂತರ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ಬಾದಾಮಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಭೇಟಿ ನೀಡುತ್ತಿದ್ದಾರೆ.

ಜೂನ್ 3 ರಂದು ಬಾದಾಮಿಗೆ ಬಂದು ಮರುದಿನ ಬೆಂಗಳೂರಿಗೆ ಮರಳಲಿರುವ ಅವರು, ಕೊರೊನಾ ಸೋಂಕು ಹರಡದಂತೆ ತಾಲ್ಲೂಕು ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರವಾಸದ ವೇಳೆ ಪರಿಶೀಲಿಸಲಿದ್ದಾರೆ.

ಬುಧವಾರ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು ಕೊಪ್ಪಳ ಜಿಲ್ಲೆ ಗಿಣಿಗೇರಾಗೆ ಬರುವ ಸಿದ್ದರಾಮಯ್ಯ, ಅಲ್ಲಿಂದ ರಸ್ತೆ ಮಾರ್ಗವಾಗಿ ಬಾದಾಮಿ ಬರಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ನಂತರ ಕೋವಿಡ್-19 ವಾರಿಯರ್ಸ್‌ಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಬಾದಾಮಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಜೂನ್ 4ರಂದು ಬೆಳಿಗ್ಗೆ 9.30ಕ್ಕೆ ಸಾರ್ವಜನಿರ ಭೇಟಿ ಮಾಡಿ, 10.30ಕ್ಕೆ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು. ಇತ್ತೀಚೆಗೆ ಕೋವಿಡ್–19 ಸೋಂಕಿನಿಂದ ತತ್ತರಿಸಿದ್ದ ಢಾಣಕಶಿರೂರು ಗ್ರಾಮಕ್ಕೆ ಬೆಳಿಗ್ಗೆ 11.30ಕ್ಕೆ ಭೇಟಿ ನೀಡುವರು. ನಂತರ ಹೊಸೂರು ಹಾಗೂ ನಂದಿಕೇಶ್ವರ ಗ್ರಾಮಗಳಿಗೆ ಭೇಟಿ ನೀಡಿ ಇತ್ತೀಚಿಗೆ ಸಿಡಿಲು ಬಡಿದು ಮೃತಪಟ್ಟವರ ಮನೆಗಳಿಗೆ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವರು. ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಅವರ ಮನೆಗೂ ಭೇಟಿ ನೀಡುವರು.

ಮಧ್ಯಾಹ್ನ 1.30ಕ್ಕೆ ಗುಳೇದಗುಡ್ಡ ಪಟ್ಟಣದಲ್ಲಿ ನಡೆಯುವ ಸಮಾರಂಭದಲ್ಲಿ ಸಂಗಮ-ಸಂಕೇಶ್ವರ ರಸ್ತೆ ಕಾಮಗಾರಿಗೆ ಚಾಲನೆ ನೀಡುವರು. ನಂತರ ಅಲ್ಲಿಂದ ಗಿಣಿಗೇರಾ ಮಾರ್ಗವಾಗಿ ಬೆಂಗಳೂರಿಗೆ ಮರಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.