ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಿಂಜೆ: ಮಹಿಳೆಗೆ ಮನೆ ದಾನ

ರಾಷ್ಟ್ರೀಯ ಉದ್ಯಾನದಿಂದಾಗಿ ನೆಲೆ ಕಳೆದುಕೊಂಡ ಸಂತ್ರಸ್ತೆ
Last Updated 2 ಜೂನ್ 2018, 5:56 IST
ಅಕ್ಷರ ಗಾತ್ರ

ಬೆಳ್ತಂಗಡಿ : ರಾಷ್ಟ್ರೀಯ ಉದ್ಯಾನದಿಂದಾಗಿ ನೆಲೆ ಕಳೆದುಕೊಂಡ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿ ಆಶ್ರಯ ನೀಡಿ ಮಾನವೀಯತೆ ಮೆರೆದ ಘಟನೆ ನಾರಾವಿ ಸಮೀಪದ ಅಂಡಿಂಜೆಯಲ್ಲಿ ನಡೆದಿದೆ.

ಕಾರ್ಕಳ ತಾಲ್ಲೂಕು ನೂರಾಳಬೆಟ್ಟು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮಾಪಾಲು ನಿವಾಸಿ ಶಾರದ ಎಂಬುವರಿಗೆ ಅಲ್ಲಿಯ ಜಾಗದ ಯಾವುದೇ ದಾಖಲೆ ಪತ್ರ ಇಲ್ಲದ ಕಾರಣ ಸರ್ಕಾರದಿಂದ ಯಾವುದೇ ಪುನರ್ವಸತಿ ಪರಿಹಾರ ಸಿಕ್ಕಿರಲಿಲ್ಲ.

ದಿಕ್ಕೆಟ್ಟು ಅತಂತ್ರ ಸ್ಥಿತಿಗೆ ಒಳಗಾಗಿದ್ದ ಅವರಿಗೆ ಕೆ.ರಾಮಚಂದ್ರ ಭಟ್ ಕುಕ್ಕುಜೆ ಮತ್ತು ದಾನಿಗಳಾದ ರಾಜೇಂದ್ರ ಪಿಳ್ಳೈ ಮತ್ತು ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ಅಂಡಿಂಜೆಯಲ್ಲಿ ₹8 ಲಕ್ಷ ಮೌಲ್ಯದ 35 ಸೆಂಟ್ಸ್‌ ಜಮೀನು ಮತ್ತು ಮನೆಯನ್ನು ನೀಡುವ ತೀರ್ಮಾನಿಸಲಾಗಿತ್ತು. ಬುಧವಾರ ಶಾರದಾ ಅವರಿಗೆ ಶಾಸಕ ಹರೀಶ್ ಪೂಂಜ ಮನೆಯ ಕೀಲಿಯನ್ನು ಹಸ್ತಾಂತರಿಸಿದರು.

ಹರೀಶ್ ಪೂಂಜ ಮಾತನಾಡಿ, ಪುನರ್ವಸತಿ ಯೋಜನೆ ಮತ್ತು ಫಲಾನುಭವಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಅಂಡಿಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಅಂಡಿಂಜೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧೀರ್ ಆರ್ ಸುವರ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಯಂತ್ ಕೋಟ್ಯಾನ್, ನಾರಾವಿ ಗ್ರಾಮ ಪಂಚಾಯಿತಿ ಸದಸ್ಯ ಉದಯಕುಮಾರ್ ಹೆಗ್ಡೆ, ನಾರಾವಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಜಯರಾಜ್ ಕಾಡ, ಸದಸ್ಯರುಗಳಾದ ಶಶಿಕಾಂತ ಅರಿಗ, ಜಯರಾಜ್ ಜೈನ್, ಪಾಶ್ರ್ವನಾಥ್ ಜೈನ್, ವಸಂತ್ ಪಾರೊಟ್ಟು, ಕುತ್ಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೆಗ್ಡೆ ಕುತ್ಲೂರು, ರಾಮ್‍ಪ್ರಸಾದ್ ಮರೋಡಿ, ಗುರುಪ್ರಸಾದ್ ಶೆಟ್ಟಿ ಈದು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT