ಸೋಮವಾರ, ಡಿಸೆಂಬರ್ 16, 2019
17 °C

ರಾಜ್ಯಮಟ್ಟದ ಟೆನ್ನಿಸ್ ಟೂರ್ನಿ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಲ್ಲಿನ ಡಿಸ್ಟ್ರಿಕ್ಟ್ ಟೆನ್ನಿಸ್ ಅಸೋಸಿಯೇಶನ್ ವತಿಯಿಂದ ನವೆಂಬರ್ 8ರಿಂದ 10ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ  ಟೆನ್ನಿಸ್ ಟೂರ್ನಿ ಆಯೋಜಿಸಲಾಗಿದೆ.

ಅಸೋಸಿಯೇಶನ್ ಅಧ್ಯಕ್ಷ ಜಿ.ಎಸ್.ಪಾಟೀಲ ಹಾಗೂ ಹಾಗೂ ಕಾರ್ಯದರ್ಶಿ ರಾಜು ಅಜ್ಜೋಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಟೂರ್ನಿಯ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕ್ರೀಡಾಂಗಣದ ಟೆನ್ನಿಸ್‌ ಅಂಕಣದಲ್ಲಿ ಟೂರ್ನಿ ನಡೆಯಲಿದ್ದು, ನವೆಂಬರ್ 9ರಂದು ಬೆಳಿಗ್ಗೆ 9.30ಕ್ಕೆ ಶಾಸಕ ವೀರಣ್ಣ ಚರಂತಿಮಠ ಟೂರ್ನಿ ಉದ್ಘಾಟಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಎಸ್‌ಪಿ ಲೋಕೇಶ ಜಗಲಾಸರ್, ಸಿಇಒ ಗಂಗೂಬಾಯಿ ಮಾನಕರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ವಿವಿಧೆಡೆಯಿಂದ 80–85 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಕ್ರೀಡಾಪಟುಗಳಿಗೆ ಅಗತ್ಯ ವಸತಿ ಹಾಗೂ ಊಟೋಪಚಾರವನ್ನು ಜಿಲ್ಲೆ ಟೆನ್ನಿಸ್ ಸಂಸ್ಥೆ ಆಯೋಜಿಸಿದೆ. ಪಂದ್ಯಾವಳಿಯಲ್ಲಿ ಬಹುಮಾನದ ಪ್ರಾಯೋಜಕತ್ವ ಡಾ.ಸೋಮಶೇಖರ ಕೆರೂಡಿ ವಹಿಸಿಕೊಂಡಿದ್ದು, ನವೀನ ವಾಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು