ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಹೆದ್ದಾರಿ: ಬಿಡಾಡಿ ದನಗಳ ಹಾವಳಿ

ಕತ್ತೆ, ನಾಯಿಗಳ ಕಾಟದಿಂದ ಬೇಸತ್ತ ಸಾರ್ವಜನಿಕರು
ಫಾಲೋ ಮಾಡಿ
Comments

ರಬಕವಿ ಬನಹಟ್ಟಿ: ಇಲ್ಲಿನ ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಬಿಡಾಡಿ ದನಗಳು, ಕತ್ತೆ, ನಾಯಿಗಳ ಹಾವಳಿ ಹೆಚ್ಚಿದೆ.

ಇಲ್ಲಿನ ವೈಭವ ಚಿತ್ರ ಮಂದಿರದಿಂದ ಭದ್ರನವರ ಮನೆಯವರೆಗಿನ ರಸ್ತೆಯಲ್ಲಿ ಕತ್ತೆ, ನಾಯಿ ಮತ್ತು ದನಕರು ಎಲ್ಲೆಂದರಲ್ಲಿ ಮಲಗಿರುತ್ತವೆ. ಇದರಿಂದ ವಾಹನ ಸವಾರರು ತೊಂದರೆಗೀಡಾಗಿದ್ದಾರೆ.

‘ರಾತ್ರಿ ಸಮಯದಲ್ಲಿ ಮಾಂಸ ಮಾರಾಟಗಾರರು ಉಳಿದ ಮಾಂಸವನ್ನು ರಾಜ್ಯ ಹೆದ್ದಾರಿ ಬಳಿಯಿರುವ ಹಳ್ಳದ ಬದಿಗೆ ಸುರಿದು ಹೋಗುತ್ತಾರೆ. ಇದರಿಂದ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ವಾಹನ ಸವಾರರಿಗೆ ಮತ್ತು ಸಂಜೆ ವಾಯು ವಿಹಾರಕ್ಕೆ ತೆರಳುವವರಿಗೆ ತೊಂದರೆ ಉಂಟುಮಾಡುತ್ತಿವೆ’ ಎಂದು ನಿವಾಸಿಗಳಾದ ಡಿ.ವಿ. ಕೋರಿ ಮತ್ತು ಮಹಾದೇವ ಮಂಡಿ ತಿಳಿಸಿದರು.

‘ದನಗಳ ಎಲ್ಲೆಂದರಲ್ಲಿ ಮಲಗಿ ಸಂಚಾರಕ್ಕೆ ಅಡಚಣೆ ತರುತ್ತಿವೆ. ಸಾಕಿದವರು ಹೀಗೆ ಬೇಕಾಬಿಟ್ಟಿ ರಸ್ತೆಯಲ್ಲಿ ಬಿಡುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ’ ಎಂದರು.

‘ಎಸ್‍ಆರ್‌ಎ ಮೈದಾನದಲ್ಲಿ ನಡೆಯುವ ಸಂತೆಯಲ್ಲಿ ಕತ್ತೆಗಳು ಬೇಕಾಬಿಟ್ಟಿಯಾಗಿ ಓಡಾಡುವುದರಿಂದ ಖರೀದಿದಾರರು ಮತ್ತು ಮಾರಾಟಗಾರರು ತೊಂದರೆ ಅನುಭವಿಸುತ್ತಿದ್ದಾರೆ. ತರಕಾರಿಗೆ ಬಾಯಿ ಹಾಕಿ, ಮಾರಾಟಗಾರರಿಗೆ ನಷ್ಟ ಉಂಟುಮಾಡುತ್ತಿವೆ’ ಎಂದು ಸಚಿನ್‍ ಐಹೊಳಿ, ಮಹಾಂತೇಶ ಪದಮಗೊಂಡ, ಶಾಂತಾ ಮಂಡಿ ಮತ್ತು ಈರಣ್ಣ ಜಿಗಜಿನ್ನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT