ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಮುಗಿಸಿದ ಐವರು ವಿದ್ಯಾರ್ಥಿಗಳು ಮಾರ್ಚ್ 6ರಂದು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಇಂಗ್ಲಿಷ್ ಶಿಕ್ಷಕ ಕೆ.ಎ. ಧಡೂತಿ ಹಾಗೂ ಗಣಿತ ಶಿಕ್ಷಕ ಎಂ.ಡಿ. ನೆವನಕ್ಕಿ ಅವರೇ ಈ ಮಕ್ಕಳ ವಿಮಾನ ಪ್ರಯಾಣದ ಕನಸು ನನಸು ಮಾಡಿದ್ದಾರೆ. ಪ್ರಯಾಣ, ಊಟ ಹಾಗೂ ಇತರ ಅಂದಾಜು ₹ 80 ಸಾವಿರ ಖರ್ಚಾಗಲಿದೆ. ಈ ಎಲ್ಲ ವೆಚ್ಚವನ್ನು ಈ ಇಬ್ಬರು ಶಿಕ್ಷಕರೇ ಭರಿಸುತ್ತಿದ್ದಾರೆ.

ಕಳೆದ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಗಣಿತ ಹಾಗೂ ಇಂಗ್ಲಿಷ್ನಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಪ್ರವಾಸ ಕರೆದುಕೊಂಡು ಹೋಗುತ್ತೇವೆ ಎಂಬ ವಾಗ್ದಾನವನ್ನು ಈ ಶಿಕ್ಷಕರು ನೀಡಿದ್ದರು. ಅದರಂತೆ ಗಣಿತದಲ್ಲಿ ರೂಪಾ ಹಳ್ಳೂರ, ಪಲ್ಲವಿ ಭದ್ರಶೆಟ್ಟಿ, ಪದ್ಮಾ ಸಣಹಟ್ಟಿ, ಸುಜಾತಾ ಯಡಹಳ್ಳಿ ಹಾಗೂ ಗಣಿತ, ಇಂಗ್ಲಿಷ್ ಎರಡೂ ವಿಷಯದಲ್ಲಿ ಮಹಾಲಿಂಗಪ್ಪ ಬಡಿಗೇರ ನೂರಕ್ಕೆ ನೂರು ಅಂಕ ಪಡೆದಿದ್ದರಿಂದ ಈ ಅವಕಾಶ ದೊರಕಿದೆ.

ವಿದ್ಯಾರ್ಥಿಗಳಿಗೆ ನೀಡಿದ ವಾಗ್ದಾನದಂತೆ ಶಿಕ್ಷಕರು ಈ ಐವರು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ವಿಮಾನ ಮೂಲಕ ಕರೆದೊಯ್ಯಲಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಬೇರೆ ಬೇರೆ ಕಾಲೇಜಿನಲ್ಲಿ ಪ್ರಥಮ ಪಿಯು ಮುಗಿಸಿದ್ದಾರೆ. ಸದ್ಯ ಇವರೆಲ್ಲ ಸೇರಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಾರ್ಚ್ 6 ರಂದು ಬೆಳಿಗ್ಗೆ 8.20ಕ್ಕೆ ಬೆಳಗಾವಿ ಸಾಂಬ್ರಾ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆದೊಯ್ಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಪ್ರಮುಖ ಸ್ಥಳಗಳ ವೀಕ್ಷಣೆ ಮಾಡಿ ಮರಳಲಿದ್ದಾರೆ.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ಹೆಚ್ಚಿನ ಅಂಕ ಪಡೆಯಲು ಉತ್ತೇಜನ ಬೆಳೆಯಬೇಕು ಹಾಗೂ ಮಕ್ಕಳಿಗೂ ವಿಮಾನದ ಪ್ರಯಾಣದ ಅನುಭವ ಮಾಡಿಸಬೇಕು ಎಂಬ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ಶಿಕ್ಷಕ ಕೆ.ಎ.ಧಡೂತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.