ತೇರದಾಳ: ಪಟ್ಟಣದಲ್ಲಿ ಮೂಲ ಸೌಲಭ್ಯಗಳ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದನ್ನು ಮುಂಬರುವ ಪುರಸಭೆ ಬಜೆಟ್ನಲ್ಲಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಹಲವು ಮುಖಂಡರು ಶುಕ್ರವಾರ ಇಲ್ಲಿನ ಪುರಸಭೆಯಲ್ಲಿ ಜರುಗಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಟ್ಟಣ ಸ್ವಚ್ಛತೆಗೊಳಿಸುವ ಪೌರ ಕಾರ್ಮಿಕರ ವೇತನಕ್ಕೆ ಅನುದಾನದಲ್ಲಿ ಮೊದಲು ಮೀಸಲು ಇಟ್ಟುಕೊಳ್ಳಿ. ಅದರಂತೆ ಕಲೂತಿ ನಗರದಲ್ಲಿ ಚರಂಡಿ ವ್ಯವಸ್ಥೆ, ಬೀದಿ ದೀಪ, ಶೌಚಾಲಯಗಳ ಸ್ವಚ್ಛತೆ, ಉದ್ಯಾನಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಮುಮದಿಟ್ಟರು.

ಸರ್ಕಾರ ನೀಡುವ ಅನುದಾನ ಹಾಗೂ ಪುರಸಭೆ ಆದಾಯ ನಿಧಿಯಿಂದ ಹಂತ ಹಂತವಾಗಿ ಪಟ್ಟಣದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುವುದು. ಸಾರ್ವಜನಿಕರು ಸಕಾಲಕ್ಕೆ ಆಸ್ತಿ ತೆರಿಗೆ, ನೀರಿನ ಕರ, ಕಟ್ಟಡ ಪರವಾನಗಿ ಸೇರಿದಂತೆ ಪುರಸಭೆಗೆ ಸಂದಾಯ ಮಾಡಬೇಕಾದ ಹಣವನ್ನು ಪಾವತಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಅಧ್ಯಕ್ಷೆ ಶಿಲ್ಪಾ ರೋಡಕರ ಹಾಗೂ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಸಾರ್ವಜನಿಕರಿಗೆ ಮನವಿ ಮಾಡಿದರು.

ಉಪಾಧ್ಯಕ್ಷೆ ನಸ್ರೀನ್ಬಾನು ನಗಾರ್ಜಿ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಸದಸ್ಯ ಸಂತೋಷ ಜಮಖಂಡಿ, ಕಂದಾಯ ಅಧಿಕಾರಿ ಎಫ್.ಬಿ. ಗಿಡ್ಡಿ, ಸಂಗಮೇಶ ಕಾಲತಿಪ್ಪಿ, ಭಾಗ್ಯಶ್ರೀ ಪಾಟೀಲ, ರೂಪಾ ಗೊಂಬಿ, ಮಹಾದೇವಿ ಮರೆಗುದ್ದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.