ತೇರದಾಳ: ಹಲವು ಬೇಡಿಕೆ ಈಡೇರಿ ಸುವಂತೆ ಆಗ್ರಹಿಸಿ ತೇರದಾಳ ತಾಲ್ಲೂ ಕಿನ ರಸಗೊಬ್ಬರ ವ್ಯಾಪಾರಸ್ಥರು ಸೋಮ ವಾರ ಒಂದು ದಿನದ ಮಟ್ಟಿಗೆ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್ ವಿಜಯ ಕುಮಾರ ಕಡಕೋಳ ಅವರಿಗೆ ಮನವಿ ಸಲ್ಲಿಸಿದರು. ವ್ಯಾಪಾಸ್ಥರಾದ ಸುರೇಶ ಕಬಾಡಗಿ, ರವಿ ಅವರಾದಿ, ಡಿಎಪಿ ಹಾಗೂ ಯುರಿಯಾ ಜೊತೆಗೆ ಒತ್ತಾಯ ದಿಂದ ಇತರೆ ಉತ್ಪನಗಳನ್ನು ಜೋಡಿಸಿ ಪೂರೈಕೆ ಮಾಡುತ್ತಿದ್ದಾರೆ. ಇದು ರೈತರಿಗೆ ಹಾಗೂ ಮಾರಾಟಗಾರರಿಗೆ ತೀವ್ರ ತೊಂದರೆನ್ನುಂಟು ಮಾಡುತ್ತಿದೆ. ಮೊದಲು ಇದನ್ನು ನಿಲ್ಲಿಸಬೇಕು. ಎಲ್ಲ ರಸಗೊಬ್ಬರ ಬೆಲೆ ಮೇಲೆ ಶೇ 8 ಲಾಭಾಂಶ ಡೀಲರ್ಗಳಿಗಾಗಿ ಬರುವ ಹಾಗೆ ಮಾಡಬೇಕು ಎಂದು ಒತ್ತಾಯಿಸಿದರು.

ಗೊಬ್ಬರ, ಬೀಜ, ಕೀಟನಾಶಕಗಳ ತಪಾಸಣೆ ಕಳಪೆ ಬಂದಾಗ ಆಯಾ ಕಂಪನಿಗಳ ಮೇಲೆ ಮಾತ್ರ ದೂರು ದಾಖಲಿಸಬೇಕು. ಡೀಲರ್ಗಳನ್ನು ಸಾಕ್ಷಿಗಳನ್ನಾಗಿ ಪರಿಗಣಿಸಬೇಕು. ಎಫ್ಐಡಿ ಮೂಲಕ ಡಿಎಪಿ ಮತ್ತು ಯುರಿಯಾ ಮಾರಾಟ ಮಾಡುವುದನ್ನು ಹಿಂಗಾರು ಬೆಳೆಗಳವರೆಗೆ ಕಡ್ಡಾಯಗೊಳಿಸಬಾರದು ಎಂದು ಹೇಳಿದರು.

ಹೀಗೆ ಒಟ್ಟು ಒಂಬತ್ತು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ನಮ್ಮ ಬೇಡಿಕೆಗಳಿಗೆ ಸಮ್ಮತಿ ನೀಡಿ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಆಗ್ರಹಿಸಿದರು. ವ್ಯಾಪಾರಿಗಳಾದ ಜಗದೀಶ ಕಬಾಡಗಿ, ತಾತ್ಯಾಸಾಹೇಬ ಕೆಂಗಾಲಿ, ಮುತ್ತು ಹಿರೇಮಠ, ಬಾಹು ಬಲಿ ಬಾಬನ್ನವರ, ಬನಪ್ಪ ಹುಕ್ಕೇರಿ, ಪ್ರಕಾಶ ಹಿರೇಮಠ, ಕುಮಾರ ಮಂಟೂರ ಮುಂತಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-19-422828883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.