ತೇರದಾಳ: ಇಲ್ಲಿನ ಅಲ್ಲಮಪ್ರಭುದೇವರ ಕಲ್ಯಾಣ ಮಂಟಪದಲ್ಲಿ ದಾನಿ ದಿ. ಚಂದ್ರವ್ವ ಜಗದಾಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ‘ಇಡೀ ಜೀವನವನ್ನೇ ಪರೋಪಕಾರಕ್ಕಾಗಿ ತ್ಯಾಗ ಮಾಡಿದ ಮಹಾದಾನಿ ಚಂದ್ರವ್ವ ಜಗದಾಳ ಅವರ ಹತ್ಯೆಯಾಗಿದ್ದು ವಿಷಾದನೀಯ. ನಮ್ಮ ಆಯಸ್ಸು ಎಷ್ಟಿತ್ತು? ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಿಕ್ಕಿಂತ ಅದನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯ. ಪರೋಪಕಾರಿ ಜೀವನ ನಡೆಸಬೇಕು. ಅದಕ್ಕೆ ಚಂದ್ರವ್ವ ಜಗದಾಳ ಅವರೇ ಮಾದರಿ’ ಎಂದು ಹೇಳಿದರು.

ಮುಖಂಡ ಪ್ರವೀಣ ನಾಡಗೌಡ ಮಾತನಾಡಿ, ‘ಚಂದ್ರವ್ವ ಅವರು ನಿಸ್ವಾರ್ಥದಿಂದ ದೇವಸ್ಥಾನಗಳಿಗೆ ದೇಣಿಗೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು’ ಎಂದು ಸ್ಮರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಲ ದೇಸಾಯಿ, ಭೀಮಗೊಂಡ ಸದಲಗಿ, ನಾಗಪ್ಪ ಸನದಿ, ಮಲ್ಲಪ್ಪ ಜಮಖಂಡಿ, ಅಲ್ಲಯ್ಯ ದೊಡಮನಿ, ಅಪ್ಪು ಮಂಗಸೂಳಿ, ಬಸಪರಯ್ಯ ಬಾವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-19-2142577340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.