ತೇರದಾಳ: ಇಲ್ಲಿನ ಪುರಸಭೆಗೆ ಸಾರ್ವಜನಿಕರು ಆಸ್ತಿ ತೆರಿಗೆ, ನೀರಿನ ಕರ ಪಾವತಿಸಲು ಬಂದರೆ ಅದನ್ನು ತುಂಬಿಕೊಳ್ಳಲು ಸಿಬ್ಬಂದಿ ಕೊರತೆಯಿರುವುದನ್ನು ಮಂಗಳವಾರ ಕಣ್ಣಾರೆ ಕಂಡ ಶಾಸಕ ಸಿದ್ದು ಸವದಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಏಪ್ರಿಲ್ನಲ್ಲಿ ತೆರಿಗೆ ಪಾವತಿಸಿದರೆ ರಿಯಾಯತಿ ಎಂದು ಘೋಷಣೆ ಮಾಡುತ್ತೀರಿ, ಅದನ್ನು ಭರಿಸಲು ಸಾರ್ವಜನಿಕರು ಬಂದರೆ ಸಿಬ್ಬಂದಿ ಇಲ್ಲದೆ ಮರಳಿ ಹೋಗುವ ಇಲ್ಲವೇ ಸಾಕಷ್ಟು ಸಮಯ ಸರದಿಯಲ್ಲಿ ಕಾಯುವ ಪರಿಸ್ಥಿತಿ ತಂದೊಡ್ಡಿದ್ದೀರಿ. ಇದೇನಾ ನೀವು ಸಾರ್ವಜನಿಕರಿಗೆ ಸ್ಪಂಧಿಸುವ ರೀತಿ’ ಎಂದು ಮುಖ್ಯಾಧಿಕಾರಿ ಎಫ್.ಬಿ. ಗಿಡ್ಡಿ ಹಾಗೂ ತೆರಿಗೆ ವಸೂಲಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತಗೆದುಕೊಂಡರು.

ತೆರಿಗೆ ಸಿಬ್ಬಂದಿ ಒಬ್ಬರೆ ಇದ್ದಿದ್ದರಿಂದ ತೊಂದರೆ ಆಗುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಹೇಳುತ್ತಿದ್ದಂತೆ ಸಾರ್ವಜನಿಕರು ಎಂಟು–ಹತ್ತು ದಿನಗಳಿಂದ ಬರುತ್ತಿದ್ದೇವೆ. ತೆರಿಗೆ ಹಣ ಪಾವತಿಸಲು ರಶೀದಿ ಕೂಡ ತೆಗೆದುಕೊಡುವವರು ಗತಿ ಇಲ್ಲ ಎಂದು ದೂರಿದರೆ, ಕೂಲಿ ಕೆಲಸ ಬಿಟ್ಟು ಬಿಸಿಲಿನಲ್ಲಿ ಬಂದು ನಿಂತಿದ್ದೇವೆ. ಯಾರು ಏಕೆ ಬಂದಿದ್ದೀರಿ ಎಂದು ಕೇಳುವವರು ದಿಕ್ಕು ಕೂಡ ಇಲ್ಲ ಎಂದು ಸಿಬ್ಬಂದಿ ವಿರುದ್ಧ ಆರೋಪಿಸಿದರು.

ಪ್ರತಿದಿನ ಸರದಿ ಪ್ರಕಾರ ತೆರಿಗೆ ಹಣ ಪಾವತಿಸಿಕೊಳ್ಳಲಾಗುತ್ತಿದೆ. ಸಿಬ್ಬಂದಿ ಎರಡು ದಿನ ಕಚೇರಿ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದರು. ಆದ್ದರಿಂದ ವಿಳಂಬವಾಗಿದೆ ಎಂದು ಮುಖ್ಯಾಧಿಕಾರಿ ಸಾಕಷ್ಟು ಸಮಜಾಯಿಸಿ ಹೇಳಲು ಮುಂದಾದರು ಕೂಡ ಶಾಸಕ ಸವದಿ ಆಕ್ರೋಶ ಮಾತ್ರ ಕಡಿಮೆಗೊಳ್ಳಲಿಲ್ಲ.

ಪುರಸಭೆ ಆಡಳಿತಾಧಿಕಾರಿ ಆಗಿರುವ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಶಾಸಕ ಸಿದ್ದು ಸವದಿ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ‘ಸಾರ್ವಜನಿಕರು ತೆರಿಗೆ ಹಣ ಪಾವತಿಸಲು ಬಂದರೆ ತುಂಬಿಸಿಕೊಳ್ಳಲು ಯಾರು ಇಲ್ಲದಷ್ಟು ಹದಗೆಟ್ಟು ಹೋಗಿದೆ ತೇರದಾಳ ಪುರಸಭೆ ಪರಸ್ಥಿತಿ. ಮೊದಲು ತಾವು ಭೇಟಿ ನೀಡಿ. ಸಿಬ್ಬಂದಿ ಸಭೆ ನಡೆಸಿ. ನನ್ನನ್ನು ಕರೆಯಿರಿ. ನಾನು ಸಭೆಗೆ ಬರುತ್ತೇನೆ’ ಎಂದು ಹೇಳಿದರು.

ಇದಕ್ಕೂ ಮೊದಲು ಮುಖ್ಯಾಧಿಕಾರಿಗಳು ಸಭಾ ಭವನದಲ್ಲಿ ಸಿಬ್ಬಂದಿಸಭೆ ನಡೆಸಿ ಕೆಳಗೆ ಬರುತ್ತಿದ್ದಂತೆ ಮಾಜಿ ಸದಸ್ಯರುಗಳಾದ ಸಂತೋಷ ಜಮಖಂಡಿ, ಕಾಶಿನಾಥ ರಾಠೋಡ ಹಾಗೂ ಮುಖಂಡರಾದ ಶಂಕರ ಕುಂಬಾರ, ಕೇದಾರಿ ಪಾಟೀಲ ‘ತೆರಿಗೆ ಪಾವತಿಸಲು ಇಷ್ಟೊಂದು ಜನ ಬಂದಿದ್ದಾರೆ. ಇಂತಹ ವೇಳೆ ಸಿಬ್ಬಂದಿ ಸಭೆ ನಡೆಸುವುದು ಅಗತ್ಯವಿತ್ತೆ. ಮಧ್ಯಾಹ್ನ ನಂತರ ಸಭೆ ನಡೆಸಬಹುದಾಗಿತ್ತು. ಅಲ್ಲದೆ ಅಧಿಕಾರಿಗಳ ಸಭೆಯಲ್ಲಿ ಬೇರೆ ಅವರು ಬರಲು ಅವಕಾಶ ಇದ್ದರೆ ಹೇಳಿ. ನಾವು ಬಂದು ಕುಳಿತುಕೊಳ್ಳುತ್ತೇವೆ’ ಎಂದು ಮುಖ್ಯಾಧಿಕಾರಿ ಗಿಡ್ಡಿ ಜತೆಗೆ ಜಟಾಪಟಿ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-19-603027300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.