ಜಿಲ್ಲೆಯಲ್ಲಿ ಒಟ್ಟು 20 ಪೊಲೀಸ್ ಠಾಣೆಗಳಿದ್ದು, 2023ರ ಜನವರಿಯಿಂದ 2023ರ ನ.6ರ ವರೆಗೆ 20 ಠಾಣೆಗಳಲ್ಲಿ ಸೇರಿ ₹6.73 ಕೋಟಿಗೂ ಅಧಿಕ ಮೊತ್ತದ ವಸ್ತುಗಳು ಕಳವುಗೊಂಡಿರುವ ಕುರಿತು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ₹1.51 ಕೋಟಿಗೂ ಅಧಿಕ ಮೊತ್ತದಷ್ಟು ವಸ್ತುಗಳನ್ನು(ಸ್ವತ್ತು) ವಶಪಡಿಸಿಕೊಳ್ಳಲಾಗಿದೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಈ ಅವಧಿಯಲ್ಲಿ ಬೈಕ್, ಚಿನ್ನ, ಲಾರಿ ಸೇರಿ ₹8.1 ಲಕ್ಷ ಮೊತ್ತದ ವಸ್ತುಗಳು ಕಳವುಗೊಂಡಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರ ಕಾರ್ಯಾಚರಣೆಯಿಂದ ₹6.9ಲಕ್ಷ (ಶೇ.85.1ರಷ್ಟು) ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ.