ತೇರದಾಳ: ಪಟ್ಟಣದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಮತ್ತೆ ನಾಲ್ಕು ತಿಂಗಳ ನಂತರ ಆರಂಭವಾಗಿದ್ದು ಅವರಲ್ಲಿ ಹರ್ಷ ತಂದಿದೆ.

ಅಂದಾಜು ₹ 50 ಲಕ್ಷ ಅನುದಾನದಲ್ಲಿ ಕೈಗೊಂಡಿದ್ದ ಕಾಮಗಾರಿ ಆರಂಭದಲ್ಲಿ ವೇಗ ಪಡೆದುಕೊಂಡು ನಂತರ ನೀರಿನ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಅದರ ನಿರ್ಮಾಣಕ್ಕೆ ತಂದಿದ್ದ ಕಚ್ಚಾ ವಸ್ತುಗಳು ರಸ್ತೆ ಬದಿ ಬಿದ್ದಿದ್ದರಿಂದ ಆ ರಸ್ತೆ ಸಂಚಾರಕ್ಕೂ ತೊಂದರೆಯಾಗಿತ್ತು. ಈ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಗುತ್ತಿಗೆದಾರ ಕಂಪನಿಯಾದ ಕರ್ನಾಟಕ ಗೃಹ ಮಂಡಳಿಯ ಸೈಟ್ ಎಂಜಿನಿಯರ್ ಅಜಯ ಶನಿವಾರ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಂಡರು. ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಬಸವರಾಜ ಗುರವ ಕಾಮಗಾರಿ ಗುಣಮಟ್ಟದ್ದಾಗಿರಲಿ ಹಾಗೂ ಶೀಘ್ರ ಮುಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕಾಮಗಾರಿ ಸ್ಥಗಿತಗೊಂಡಿದ್ದರ ಕುರಿತಾಗಿ ಪ್ರಜಾವಾಣಿಯಲ್ಲಿ ಫೆ.20ರಂದು `ಪಶು ಆಸ್ಪತ್ರೆ: ಅರ್ಧಕ್ಕೆ ನಿಂತ ಕಾಮಗಾರಿ, ಸಂಚಾರಕ್ಕೂ ಕಿರಿಕಿರಿ’ ಎಂಬ ವರದಿ ಪ್ರಕಟಿಸಿತ್ತು. ಇದರ ಪರಿಣಾಮವಾಗಿ ಎಚ್ಚರಗೊಂಡ ಇಲಾಖೆಯು ಗುತ್ತಿಗೆದಾರ ಕಂಪನಿಯನ್ನು ಸಂಪರ್ಕಿಸಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.