ಬಾಗಲಕೋಟೆ: ರನ್ನ ಪ್ರತಿಷ್ಠಾನ, ಪಿ.ಬಿ. ದುತ್ತರಗಿ ಟ್ರಸ್ಟ್ನೊಂದಿಗೆ ಮತ್ತೊಂದು ಟ್ರಸ್ಟ್ ಹಾಗೂ ಪ್ರತಿಷ್ಠಾನ ಸೇರಿಕೊಂಡಿವೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಗರಿಗೆದರಲಿವೆ.

ನಾಟಕಕಾರ ಪಿ.ಬಿ.ದುತ್ತರಗಿ ಹೆಸರಿನಲ್ಲಿರುವ ಟ್ರಸ್ಟ್ನೊಂದಿಗೆ ಮತ್ತಿತರರು ನಾಟಕಕಾರರಾದ ಕಂದಗಲ್ ಹನುಮಂತರಾಯ, ಚಿತ್ತರಗಿಯ ಗಂಗಾಧರ ಶಾಸ್ತ್ರಿ ಹೆಸರಿನಲ್ಲಿ ಟ್ರಸ್ಟ್ ಹಾಗೂ ಪ್ರತಿಷ್ಠಾನ ರಚನೆ ಮಾಡಲಾಗಿದೆ.

ವೃತ್ತಿ ರಂಗಭೂಮಿಗೆ ಹೆಸರಾದ ಜಿಲ್ಲೆ ಬಾಗಲಕೋಟೆ. ಅಲ್ಲಿ ಈಗ ಮೂರು ವ್ಯಕ್ತಿಗಳ ಹೆಸರಿನಲ್ಲಿ ಟ್ರಸ್ಟ್, ಪ್ರತಿಷ್ಠಾನಗಳಾಗಿರುವುದರಿಂದ ಅವರ ಜೀವನ, ನಾಟಕಗಳ ಅಧ್ಯಯನದ ಜತೆಗೆ ವೃತ್ತಿ ರಂಗಭೂಮಿಗೂ ಪುನಃಶ್ಚೇತನ ನೀಡುವ ಕೆಲಸ ಆಗಬೇಕಿದೆ.

ಹನುಮಂತರಾಯರ ಹಾಗೂ ಗಂಗಾಧರ ಶಾಸ್ತ್ರಿಗಳ ಟ್ರಸ್ಟ್ಗೆ ಸದ್ಯಕ್ಕೆ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಕಚೇರಿಯಾಗಿರಲಿದೆ. ಈಗಾಗಲೇ ಗಂಗಾಧರ ಶಾಸ್ತ್ರಿಗಳ ಟ್ರಸ್ಟ್ಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ. ಹನುಮಂತರಾಯರ ಪ್ರತಿಷ್ಠಾನಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಬೇಕಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ರನ್ನ ಪ್ರತಿಷ್ಠಾನ, ದುತ್ತರಗಿ ಟ್ರಸ್ಟ್ನಿಂದ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ. ಹಲವಾರು ವರ್ಷಗಳಿಂದ ಬಿಡುಗಡೆಯಾಗಿದ್ದ ಅನುದಾನ ಹಾಗೆಯೇ ಉಳಿದಿತ್ತು. ಪ್ರತಿ ತಿಂಗಳು ಅವರ ಸಾಹಿತ್ಯ, ನಾಟಕಗಳ ಕುರಿತು ಚರ್ಚೆ, ವಿಚಾರಗೋಷ್ಠಿ, ಶಾಲೆಗಳಲ್ಲಿ ಮಕ್ಕಳಿಗೆ ಸ್ಪರ್ಧೆ, ನಾಟಕಗಳ ಪ್ರದರ್ಶನದ ಕೆಲಸಗಳು ಆಗಬೇಕಿವೆ.

ಇತ್ತೀಚಿನ ದಿನಗಳಲ್ಲಿ ಟ್ರಸ್ಟ್, ಪ್ರತಿಷ್ಠಾನಕ್ಕೆ ಬರುವ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಹೊಸ ಟ್ರಸ್ಟ್, ಪ್ರತಿಷ್ಠಾನಕ್ಕೂ ಬೇಗನೆ ಅನುದಾನ ನೀಡಿ ಚಟುವಟಿಕೆಗಳು ಆರಂಭವಾಗಲಿ ಎಂಬುದು ಅಭಿಮಾನಿಗಳ ಬಯಕೆ.

ಕನ್ನಡದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ

ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ನಲ್ಲಿ 1896ರಲ್ಲಿ ಜನಿಸಿದರು. ಮುಂದೆ ನಾಟಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಕಂದಗಲ್ ಹನುಮಂತರಾಯರನ್ನು ಕನ್ನಡ ರಂಗಭೂಮಿಯ ಶೇಕ್ಸ್ಪಿಯರ್ ಎಂದೇ ಕರೆಯಲಾಗುತ್ತದೆ.

ಅವರು ರಚಿಸಿದ ರಕ್ತರಾತ್ರಿ, ಕುರುಕ್ಷೇತ್ರ, ಅಕ್ಷಯಾಂಬರ, ಚಿತ್ರಾಂಗದ ನಾಟಕಗಳನ್ನು ಹಳ್ಳಿ, ಹಳ್ಳಿಗಳಲ್ಲಿ ಪ್ರದರ್ಶನಗೊಂಡಿದ್ದವು. ಅಷ್ಟೊಂದು ಪ್ರಸಿದ್ಧಿ ಪಡೆದಿದ್ದವು. ಈಗಲೂ ಅಲ್ಲಲ್ಲಿ ಪ್ರದರ್ಶನಗೊಳ್ಳುತ್ತಲೇ ಇವೆ.

ಲಲಿತ ನಾಟ್ಯ ಸಂಗೀತ ಮಂಡಳಿ ಕಟ್ಟಿ ಕೈಸುಟ್ಟುಕೊಂಡರು. ನಂತರದಲ್ಲಿ ಅರವಿಂದ ಸಂಗೀತ ನಾಟ್ಯ ಮಂಡಳಿ ಎಂಬ ನಾಟಕ ಕಂಪನಿ ಕಟ್ಟಿದರು. ಕಂಪನಿಗಳಿಗಾಗಿ ಮಾಡಿಕೊಂಡಿದ್ದ ಸಾಲ ತೀರಿಸದ್ದಕ್ಕೆ ಸಾಲಕೊಟ್ಟವರು ಜೈಲು ಸೇರುವಂತೆ ಮಾಡಿದ್ದರು.

ಬಾಲ್ಯದಿಂದಲೇ ಅವರಿಗೆ ಸಂಗೀತ, ನಾಟಕಗಳ ಬಗೆಗೆ ಆಸಕ್ತಿ ಇತ್ತು. ಆದರೆ, ಕುಟುಂಬದವರ ಒತ್ತಾಸೆಯಂತೆ ಪುಣೆಗೆ ತೆರಳಿದ ಅವರು, ಮಿಲಿಟರಿಯಲ್ಲಿ ಕಾರಕೂನರಾಗಿದ್ದರು. ಅಲ್ಲಿಯೂ ನಾಟಕದ ಚಟುವಟಿಕೆಗಳನ್ನು ಮುಂದುವರೆಸಿದ್ದರು. ನಂತರ ತಾಯಿ ಅನಾರೋಗ್ಯದ ಕಾರಣ ಮತ್ತೆ ಮರಳಿದರು.

ಸಂಧ್ಯಾರಾಗ, ವರಪ್ರದಾನ, ಅಕ್ಷಯಾಂಭರ, ಜ್ವಾಲೆ, ಬಡತನದ ಭೂತ ನಾಟಕಗಳನ್ನು ಬರೆದು, ತಮ್ಮದೇ ನಾಟಕಗಳ ಕಂಪನಿ ಮೂಲಕ ಆಡಿಸಿದರು. ರಕ್ತರಾತ್ರಿ ನಾಟಕ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟಿತು. ನಾಟಕ ಆಡಿದವರೆಲ್ಲ ಹಣ ಸಂಪಾದನೆ ಮಾಡಿದರು. ಆದರೆ, ಅದರ ಲಾಭ ರಾಯರಿಗೆ ದೊರೆಯಲಿಲ್ಲ. 1966 ಮೇ 5ರಂದು ನಿಧನರಾದರು.

ರಂಗಭೂಮಿಗೆ ಚೈತನ್ಯ ತುಂಬಿದ ಗಂಗಾಧರ ಶಾಸ್ತ್ರಿ

ಕೀರ್ತನಕಾರ, ನಟ, ನಾಟಕಕಾರ, ಕಂಪನಿಯ ಮಾಲೀಕರಾಗಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ. 1916ರಲ್ಲಿ ಬಾಗಲಕೋಟೆ ತಾಲ್ಲೂಕಿನ ಶಿರೂರಿನಲ್ಲಿ ಜನಿಸಿದ್ದರು.

ಕುಮಾರ ವಿಜಯ ನಾಟ್ಯ ಸಂಘ ಎಂಬ ಕಂಪನಿ ನಡೆಸಿದ್ದರು. ಈ ಕಂಪನಿಯಲ್ಲಿ 300 ಜನ ಕಲಾವಿದರು, ಕೆಲಸಗಾರರು ಇದ್ದರು. ಇದರಿಂದ ಉತ್ತೇಜಿತರಾದ ಅವರು ಮೂರು ಕಂಪನಿಗಳನ್ನು ಪ್ರಾರಂಭಿಸಿದ್ದರು. ಕುಮಾರ ವಿಜಯ ನಾಟ್ಯ ಸಂಘ ರಂಗಭೂಮಿಗೆ ಹೊಸ ಚೈತನ್ಯವನ್ನೇ ನೀಡಿತ್ತು.

ಸೌಭಾಗ್ಯ ಲಕ್ಷ್ಮೀ, ಜೀವನಯಾತ್ರೆ, ಸುಲೋಚನಾ, ಜಗಜ್ಯೋತಿ ಬಸವೇಶ್ವರ, ದೀಪಾವಳಿ, ಯೋಗ ಶಕ್ತಿ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಶಾಸ್ತ್ರಿ ಅವರು ರಚಿಸಿದ ‘ಸೌಭಾಗ್ಯ ಲಕ್ಷ್ಮಿ’ ಮೂರು ವರ್ಷಗಳ ಕಾಲ ಪ್ರದರ್ಶನಗೊಂಡಿತ್ತು. ಅಂದಿನ ಮುಂಬೈ ಸರ್ಕಾರವು ಈ ನಾಟಕ ಪ್ರದರ್ಶನ ಏರ್ಪಡಿಸಿ, ಅತ್ಯುತ್ತಮ ನಾಟಕ ಪ್ರಶಸ್ತಿ, ₹ 5 ಸಾವಿರ ನೀಡಿತ್ತು. ಜೀವನಯಾತ್ರೆ ನಾಟಕವೂ ಯಶಸ್ವಿಯಾಗಿ ನೂರು ದಿನಗಳ ಪ್ರದರ್ಶನ ಕಂಡಿತ್ತು. 1975ರಲ್ಲಿ ಅವರು ನಿಧನರಾದರು.

ಪ್ರತಿಷ್ಠಾನದ ಅಧ್ಯಕ್ಷರನ್ನಾಗಿ ಗುರು ಹಿರೇಮಠ, ಸದಸ್ಯರನ್ನಾಗಿ ಶಿವುಕುಮಾರ ಹಿರೇಮಠ, ಅಭಯ ಮನಗೂಳಿ, ಪರಸಪ್ಪ ಬಿಸಲದಿನ್ನಿ, ವಿಜಯಲಕ್ಷ್ಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ವಿಜಯಕುಮಾರ ಕಟಗಿಹಳ್ಳಿಮಠ, ಮಲ್ಲಪ್ಪ ಬಿಸರಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕಾರ್ಯದರ್ಶಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.