ಶನಿವಾರ, ಜೂನ್ 19, 2021
22 °C

ತುಳಸಿ ಪೂಜೆಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ನಗರದಲ್ಲಿ ತುಳಸಿ ಪೂಜಾ (ವಿವಾಹ) ಕಾರ್ಯಕ್ರಮ ಗುರುವಾರ ಸಂಜೆ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ ಹಚ್ಚಲಾಯಿತು. ಕಬ್ಬು, ಮಾವಿನ ತಳಿರು- ತೋರಣ ಹಾಗೂ ಹೂ ದಂಡೆ, ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.

ಮೇಣದ ಬತ್ತಿ, ಹಣತೆಯ ದೀಪಗಳಿಂದ ಆವರಣ ಬೆಳಗಿಸಲಾಗಿತ್ತು. ವಿವಿಧ ರಂಗು-ರಂಗಾದ ರಂಗವಲ್ಲಿ ಎಲ್ಲರ ಮನೆ ಮುಂದೆ ರಾರಾಜಿಸುತ್ತಿದ್ದವು. ಗಣೇಶ ಪೂಜೆ ಬಳಿಕ ಶ್ರೀಕಷ್ಣನ ಮೂರ್ತಿಗೆ ಅಭಿಷೇಕ ಪೂಜೆ ನೆರವೇರಿಸಿ, ತುಳಸಿ ಮಾತೆಗೆ ಪೂಜಿಸಲಾಯಿತು.

ದೀಪ-ಧೂಪ, ತುಪ್ಪದಾರುತಿ ಬೆಳಗಿ, ರಾಧಾ- ಕೃಷ್ಣ ಭಕ್ತಿ ಗೀತೆಗಳೊಂದಿಗೆ ಆರತಿ ಮಾಡಲಾಯಿತು. ನಗರದ ಶಿಕ್ಷಕರ ಕಾಲೋನಿಯಲ್ಲಿನ ಪೂಜೆಯಲ್ಲಿ ಮಹಿಳೆಯರು, ಮಕ್ಕಳು ಭಾಗವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು