ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಟ್ರಕ್ ಪಲ್ಟಿ; ಎರಡು ಸಾವಿರ ಕೋಳಿ ಸಾವು

Last Updated 1 ಮಾರ್ಚ್ 2022, 6:17 IST
ಅಕ್ಷರ ಗಾತ್ರ

ಬಾಗಲಕೋಟೆ: ತಾಲ್ಲೂಕಿನ ಹೊನ್ನಾಕಟ್ಟಿ ಬಳಿ ಮಂಗಳವಾರ ಬೆಳಿಗ್ಗೆಟ್ರಕ್‌ವೊಂದು ಪಲ್ಟಿಯಾಗಿದ್ದು, ಅದರಲ್ಲಿದ್ದ ಅಂದಾಜು ಎರಡು ಸಾವಿರ ಕೋಳಿಗಳು ಮೃತಪಟ್ಟಿವೆ.

ಬೆಳಗಾವಿಯಿಂದ ಆಂಧ್ರದ ಎಮ್ಮಿಗನೂರಿಗೆ ತೆರಳುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ವಾಹನದಲ್ಲಿ ಐದು ಸಾವಿರ ಕೋಳಿಗಳಿದ್ದವು. ಸ್ಥಳೀಯ ಫಾರ್ಮ್‌ಗಳಿಂದ ಕೋಳಿ ಖರೀದಿಸಿ ಎಮ್ಮಿಗನೂರಿಗೆ ಮಾರಾಟಕ್ಕೆ ಕಳುಹಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT