ಬಾಗಲಕೋಟೆ: ‘ಆಲಮಟ್ಟಿ ಜಲಾಶಯ ನಿರ್ಮಾಣ, ನೀರು ನಿಲ್ಲಿಸಿ ನೀರಾವರಿ ಕಲ್ಪಿಸುವಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದಾಗಿದೆ. ಈ ವಿಷಯದಲ್ಲಿ ಮಾತನಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ’ ಎಂದು ಸಚಿವ ಎಚ್.ಕೆ. ಪಾಟೀಲ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1975ರಿಂದ 1999ರವರೆಗೆ ₹14,500 ಕೋಟಿ ಖರ್ಚು ಮಾಡ ಲಾಗಿದೆ. ನಾನು ನೀರಾವರಿ ಸಚಿವನಾಗಿದ್ದ ನಾಲ್ಕು ವರ್ಷಗಳಲ್ಲಿ ₹8,200 ಕೋಟಿ ಅನುದಾನ ನೀಡಲಾಗಿತ್ತು. ನಿಮ್ಮ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದು 13 ವರ್ಷ ಕಳೆದರೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುತ್ತಿಲ್ಲ. 2050ಕ್ಕೆ ಅಂತ್ಯಗೊಳ್ಳಲಿದೆ. ಕೂಡಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಈಗಾಗಲೇ 2.55 ಲಕ್ಷ ಹೆಕ್ಟೇರ್ಗೆ ನೀರಾವರಿ ಕಲ್ಪಿಸಲಾಗಿದೆ. ಉಳಿದಿರುವ ಭೂಮಿಗೂ ನೀರು ಒದಗಿಸುವ ನಿಟ್ಟಿನಲ್ಲಿ ಬಿ ಸ್ಕೀಂನಲ್ಲಿ ಬರುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮೂರನೇ ಹಂತದಲ್ಲಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಭೂಮಿಗೂ ಪರಿಹಾರ ಧನ ಹೆಚ್ಚಳ ಮಾಡಲಾಗಿದೆ. ವಿತರಣೆಯನ್ನೂ ಆರಂಭಿಸಲಾಗಿದೆ’ ಎಂದರು.

‘3 ವರ್ಷಗಳಿಂದ ಕೇಂದ್ರ ಜಿಎಸ್ಟಿ ಪರಿಹಾರ ನೀಡಿಲ್ಲ. ಅನ್ನಭಾಗ್ಯಕ್ಕೆ ಅಕ್ಕಿ ಕೇಳಿದಾಗ ರಾಜ್ಯ ಸರ್ಕಾರಕ್ಕೆ ನೀಡದೇ ಖಾಸಗಿಯವರಿಗೆ ನೀಡಿದರು’ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಅನುದಾನ ವನ್ನು ಅವರಪ್ಪನ ಮನೆಯಿಂದ ನೀಡುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಯಾರಾದರೂ ಅವರಪ್ಪನದ್ದು ಕೊಡುತ್ತಾರೆಯೇ? ಮೋದಿ ಅವರು ಅವರಪ್ಪನ ಮನೆಯದ್ದು ಕೊಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ₹100 ಜಿಎಸ್ಟಿ ಸಂಗ್ರಹವಾದರೆ ₹13.50 ರಾಜ್ಯಕ್ಕೆ ನೀಡಲಾಗುತ್ತದೆ. ನಮ್ಮಪ್ಪನ ದುಡ್ಡು ತೆಗೆದುಕೊಳ್ಳುತ್ತಿದ್ದೀರಿ. 253 ಲಕ್ಷ ಕೋಟಿ ಸಾಲ ಮಾಡಿದ ಮೋದಿ ಅವರಿಗೆ ಛೀ, ಥೂ ಅನ್ನಬೇಕು. ಸಿದ್ದರಾಮಯ್ಯ ಅವರು ಹೇಳುವುದು ಸುಳ್ಳು ಎನ್ನುತ್ತೀರಿ. 2 ಕೋಟಿ ಉದ್ಯೋಗ, ಕಪ್ಪು ಹಣದ ₹15 ಲಕ್ಷ ಎಲ್ಲಿ ಹೋಯಿತು’ ಎಂದು ಕೇಳಿದರು.

ಮಾಜಿ ಸಚಿವ ಎಸ್.ಆರ್. ಪಾಟೀಲ, ಎ. ವಸಂತಕುಮಾರ, ಶಾಸಕ ಜೆ.ಟಿ. ಪಾಟೀಲ, ಎಸ್.ಜಿ. ನಂಜಯ್ಯನಮಠ , ಬಿ.ಬಿ. ಚಿಮ್ಮನಕಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-19-1236837075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.