ರಸ್ತೆಯಲ್ಲಿದ್ದ ಮುಳ್ಳು ಕಂಟಿಗಳ ತೆರವು

7
ಅನಗವಾಡಿ ಗ್ರಾಮ: ವಾರದಲ್ಲಿ ಸಮಸ್ಯೆ ಬಗೆಹರಿಸಲು ತಹಸೀಲ್ದಾರ್‌ ಸೂಚನೆ

ರಸ್ತೆಯಲ್ಲಿದ್ದ ಮುಳ್ಳು ಕಂಟಿಗಳ ತೆರವು

Published:
Updated:
Deccan Herald

ಬೀಳಗಿ: ಊಣದ ಕುಟುಂಬಕ್ಕೆ ಸೇರಿದ ಜಮೀನಿನ ಬಗ್ಗೆಗಿನ ಸಮಸ್ಯೆಯನ್ನು ಒಂದು ವಾರದಲ್ಲಿ ಪರಿಹರಿಸುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು. ಇದರಿಂದ ಆ ಕುಟುಂಬ ಸದಸ್ಯರು ರಸ್ತೆಗೆ ಹಾಕಿದ್ದ ಮುಳ್ಳುಕಂಟಿಗಳನ್ನು ತೆರವುಗೊಳಿಸಿದರು.

ತಾಲ್ಲೂಕಿನ ಅನಗವಾಡಿ ಗ್ರಾಮದ ಪುನರ್ ವಸತಿ ಕೇಂದ್ರದ ಭೂಮಿಗೆ ಪರಿಹಾರ ನಿಗದಿಮಾಡುವಾಗ ಅಧಿಕಾರಿಗಳು ಮಾಡಿದ ತಪ್ಪಿನಿಂದ ನ್ಯಾಯಾಲಯ ಗ್ರಾಮದ ಊಣದ ಕುಟುಂಬಕ್ಕೆ 13 ಗುಂಟೆಯ ಸ್ಥಳವನ್ನು ಕೊಟ್ಟು ಆದೇಶಮಾಡಿದೆ. ತಮಗೆ ದೊರೆತ ರಸ್ತೆಗೆ ಊಣದ ಕುಟುಂಬದವರು ಮುಳ್ಳು ಕಂಟಿಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ತಹಶೀಲ್ದಾರ್‌ ಉದಯ ಕುಂಬಾರ ಅವರು ಸರ್ವೆ, ಎಸ್.ಎಲ್.ಒ ಹಾಗೂ ಆರ್.ಒ ಇಲಾಖೆಯ ಸಿಬ್ಬಂದಿಯನ್ನು ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿದ್ದರು. ಒಂದು ವಾರದಲ್ಲಿ ಸಮಸ್ಯೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ವಿಭಾಗದಿಂದ 1999ರಲ್ಲಿ ಅನಗವಾಡಿ ಪುನರ್ ವಸತಿ ನಿರ್ಮಾಣಕ್ಕೆ ಗ್ರಾಮದ ಊಣದ ಕುಟುಂಬಕ್ಕೆ ಸೇರಿದ 2 ಎಕರೆ 25 ಗುಂಟೆ ಜಮೀನಕ್ಕೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದ ಜಮೀನಕ್ಕೆ ಹರಿಹಾರ ನೀಡಿರುವುದಿಲ್ಲ. ಆ ಸ್ಥಳದಲ್ಲಿ ಅನಗವಾಡಿ ಪುನರ್ ನಿರ್ಮಾಣ ಮಾಡಿ ಅದರಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಳಿದ ಜಮೀನಿಗೆ ಊಣದ ಕುಟುಂಬದವರು ಪರಿಹಾರ ಕೇಳಿದರೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದರಿಂದ ಊಣದ ಕುಟುಂಬದವರು ನ್ಯಾಯಾಲಯ ಮೊರೆ ಹೋಗಿದ್ದರು.

ನ್ಯಾಯಾಲಯ ಊಣದ ಕುಟುಂಬಕ್ಕೆ 13 ಗುಂಟೆ ಉಳಿದ ಜಮೀನವನ್ನು ನೀಡಬೇಕು ಎಂದು ಆದೇಶ ನೀಡಿದೆ. ತಮ್ಮ ಜಮೀನಿಗೆ ಪರಿಹಾರ ಕೊಡಿರಿ ಎಂದು ಊಣದ ಕುಟುಂಬದವರು ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಕೇಳಿದರು ಯಾವ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಊಣದ ಕುಟುಂಬದವರು ತಮ್ಮ ಒಡೆತನಕ್ಕೆ ಬಂದ ರಸ್ತೆಗೆ ಮುಳ್ಳು ಕಂಠಿಗಳನ್ನು ಹಾಕಿ ಬಂದ್ ಮಾಡಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು.

ಗ್ರಾಮದ ನಾಡ ಕಚೇರಿಯಲ್ಲಿ ತಹಶೀಲ್ದಾರ್‌ ಅವರು ಸಿಬ್ಬಂದಿ ಹಾಗೂ ಊನದ ಕುಟುಂಬದವರ ಸಭೆ ನಡೆಸಿದರು. ಈ ಸ್ಥಳದಲ್ಲಿ ಜಿಎಲ್‌ಬಿ ಕಾಲುವೆ ಹಾಯಿದು ಹೋಗಿದ್ದರೆ, ಆ ಇಲಾಖೆಯವರು ಏನಾದರೂ ಪರಿಹಾರ ನೀಡಿದ್ದರೆ ಅದನ್ನು ಹಿಡಕಲ್ ಡ್ಯಾಮಿಗೆ ಹೋಗಿ ಪರೀಕ್ಷಿಸಬೇಕು ಎಂದು ಅಧಿಕಾರಿಗಳು ಹೇಳಿದರು. ಆ ಇಲಾಖೆಯಲ್ಲಿ ಪರಿಹಾರ ನೀಡದಿದ್ದರೆ ಕೂಡಲೇ ಪರಿಶೀಲನೆ ನಡೆಸಿ ಚರ್ಚಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ. ಊಣದ ಕುಟುಂಬಕ್ಕೆ ಅನುಕೂಲಮಾಡಬೇಕು ಎಂದು ತಹಶೀಲ್ದಾರ್‌ ಸೂಚಿಸಿದರು. ವಾರದಲ್ಲಿ ಸಮಸ್ಯೆ ನಿವಾರಣೆ ಮಾಡುವುದಾಗಿ ಊಣದ ಕುಟುಂಬಕ್ಕೆ ತಹಶೀಲ್ದಾರ್‌ ಭರವಸೆ ನೀಡಿದ್ದರಿಂದ ರಸ್ತೆಗೆ ಹಾಕಿದ ಮುಳ್ಳು ಕಂಟಿಗಳನ್ನು ತೆಗೆಯಲಾಯಿತು.

ನ್ಯಾಯಾಲಯ ಎಲ್ಲ ದಾಖಲೆಗಳನ್ನು ಪರೀಕ್ಷಿಸಿ ನಮ್ಮ 13 ಗುಂಟೆ ಜಮೀನನ್ನು ನಮಗೆ ನೀಡಿದೆ. ಎಲ್ಲ ದಾಖಲೆಗಳನ್ನು ಪರೀಕ್ಷಿಸಿ ನಮ್ಮ ಸ್ಥಳವನ್ನು ಬಿಟ್ಟು ಕೊಡಬೇಕು. ಇಲ್ಲದಿದ್ದರೆ ಪಕ್ಕದಲ್ಲಿರುವ ಜಾಗ ಒದಗಿಸಬೇಕು
- ಪ್ರಕಾಶ ಮಲ್ಲಪ್ಪ ಊಣದ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !