ಬೀಳಗಿ: ಸ್ಥಳೀಯ ಬಾಡಗಂಡಿಯ ಗುರು ಹಜರತ್ ಫೀರ್ ಹಸನ್ ಡೊಂಗ್ರಿ ಸಾಹೇಬರ ಜಾತ್ರೆ ಐದು ದಿನಗಳವರೆಗೆ ಭಕ್ತಿಭಾವ ಮತ್ತು ಸಾಂಸ್ಕೃತಿಕ ವೈಭವದಿಂದ ಕಂಗೊಳಿಸುತ್ತಿತ್ತು. ಪಾರಂಪರಿಕ ಕ್ರೀಡೆಯಾದ ಮಲ್ಲಗಂಬ ಪ್ರದರ್ಶನ ನೆರೆದಿದ್ದ ಸಾವಿರಾರು ಜನರ ಗಮನ ಸೆಳೆಯಿತು.

ಎಚ್.ಯು.ಪಿ. ಸರ್ಕಾರಿ ಪ್ರೌಢಶಾಲೆ ಹಾಗೂ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ ತುಳಸಿಗೇರಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೀಡಿದ ಮಲ್ಲಗಂಬದ ಕಸರತ್ತು ಪ್ರದರ್ಶನ ಪ್ರೇಕ್ಷಕರನ್ನು ಅಚ್ಚರಿಗೊಳಿಸಿತು. ತಮ್ಮ ವಯಸ್ಸಿಗಿಂತ ಮಿಗಿಲಾದ ಚುರುಕುತನ, ದೈಹಿಕ ಸಾಮರ್ಥ್ಯ ಮತ್ತು ಸಮತೋಲನವನ್ನು ಪ್ರದರ್ಶಿಸಿದ ಮಕ್ಕಳು ಗಗನಕ್ಕೇರಿ ದಂತೆ ಕಂಡು ಬಂದರು. ಕಬ್ಬಿಣದಂತಹ ದೇಹಬಲ, ಏಕಾಗ್ರತೆ ಮತ್ತು ಶಿಸ್ತಿನೊಂ ದಿಗೆ ಅವರು ಪ್ರದರ್ಶಿಸಿದ ಪ್ರತಿ ಯೊಂದು ಕಸರತ್ತು ನೋಡುಗರಿಂದ ಚಪ್ಪಾಳೆ ಹಾಗೂ ಮೆಚ್ಚುಗೆಗೆ ಪಾತ್ರವಾಯಿತು.

ಜಾತ್ರಾ ಕಮಿಟಿಯ ಮುಖ್ಯಸ್ತ ಎ.ವೈ.ಕಣವಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಪಾರಂಪರಿಕ ಕ್ರೀಡೆಗಳಲ್ಲಿ ಮಲ್ಲಗಂಬ ವಿಶಿಷ್ಟ ಸ್ಥಾನ ಹೊಂದಿದೆ. ಸುಮಾರು 12ನೇ ಶತಮಾನದಿಂದಲೇ ಭಾರತದ ಅಖಾಡಗಳಲ್ಲಿ ದೇಹದಾರ್ಢ್ಯ ಮತ್ತು ಯೋಧರಿಗೆ ತರಬೇತಿ ನೀಡುವ ಸಾಧನವಾಗಿ ಇದು ಬಳಕೆಯಲ್ಲಿತ್ತು ಎಂದರು.

ಮರದ ಕಂಬ ಅಥವಾ ಹಗ್ಗದ ಮೇಲೆ ದೇಹವನ್ನು ಸಮತೋಲನಗೊಳಿಸಿ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಈ ಕಲೆ ಕೇವಲ ಕ್ರೀಡೆಯಲ್ಲ, ದೈಹಿಕ ಸಾಮರ್ಥ್ಯ, ಮಾನಸಿಕ ಏಕಾಗ್ರತೆ ಮತ್ತು ಧೈರ್ಯದ ಸಂಕೇತವಾಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಯುವಜನರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಮಹತ್ವದ ಸಾಧನವಾಗಿ ಮಲ್ಲಗಂಬ ಗುರುತಿಸಿಕೊಂಡಿದೆ ಎಂದ ಅವರು ಪಾರಂಪರಿಕ ಕಲೆ ಮತ್ತು ಕ್ರೀಡೆಗಳಿಗೆ ಉತ್ತೇಜನ ನೀಡಿ ಪ್ರತಿಭಾವಂತ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ನಮ್ಮ ಜಾತ್ರೆಯ ಮುಖ್ಯ ಉದ್ದೇಶ ಎಂದರು.

ಜಾತ್ರಾ ಕಮಿಟಿಯ ಹೊನ್ನ ನಾಯಕ ಕಣವಿ, ಯಂಕಣ್ಣ ಕಣವಿ, ಜಗತ್ತ ನಾಯಕ ಕಣವಿ, ರಾಯಪ್ಪ ಕಣವಿ, ರವಿ ಕಣವಿ, ಲಕ್ಷ್ಮಣ ಹರದೋಳ್ಳಿ, ಚಂದ್ರಶೇಖರ ಹರದೋಳ್ಳಿ, ಮುತ್ತು ಕಣವಿ, ರಮೇಶ ಹರದೋಳ್ಳಿ, ಶಿವಾನಂದ ಕಣವಿ, ಚಿದಾನಂದ ಕಣವಿ, ಭರಮಪ್ಪ ಕಣವಿ, ಕಿಟ್ಟು ಕಣವಿ ಸೇರಿದಂತೆ ಕಮಿಟಿಯ ಎಲ್ಲ ಸದಸ್ಯರು ಹಾಗೂ ಗಣ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-19-1112737678

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.