ಬೀಳಗಿ: ತಾಲ್ಲೂಕಿನ ರೊಳ್ಳಿ, ಬಾಡಗಂಡಿ, ಲಿಂಗಾಪುರ ಎಸ್.ಆರ್, ಹೆಗ್ಗೂರ, ಅರಕೇರಿ ಸೇರಿದಂತೆ ವಿವಿಧೆಡೆ ಗುರುವಾರ ಸಂಜೆ ಜೋರಾಗಿ ಸುರಿದ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ತಾಲ್ಲೂಕಿನ ರೊಳ್ಳಿ ಗ್ರಾಮದ ಮಲ್ಲಪ್ಪ ಗಡ್ಡಿ ಅವರ ತಲೆಯ ಮೇಲೆ ಪತ್ರಾಸ್ ಮೇಲಿನ ಕಲ್ಲು ಬಿದ್ದು ತಲೆಗೆ ಗಾಯವಾಗಿದೆ. ಇದೇ ಗ್ರಾಮದ ಆನಂದ ತೋಟಗೇರ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮರಣ ಹೊಂದಿದೆ.

ಬಾಡಗಂಡಿ ಗ್ರಾಮದ 12, ಅರಿಕೇರಿಯ 5, ರೊಳ್ಳಿ ಗ್ರಾಮದ 18, ಹೆಗ್ಗೂರು ಗ್ರಾಮದ 1, ಲಿಂಗಾಪುರ ಎಸ್ .ಆರ್. ಗ್ರಾಮದ 2 ವಾಸವಿರುವ ತಗಡಿನ ಶೆಡ್ಗಳ ಚಾವಣಿ ಹಾರಿಹೋಗಿವೆ.

ರೊಳ್ಳಿ ಗ್ರಾಮದ 10 ಹಾಗೂ ಕೊಪ್ಪ .ಎಸ್.ಕೆ ಗ್ರಾಮದ 6 ದನದ ತಗಡಿನ ಶೆಡ್ಗಳಿಗೆ ಹಾನಿಯಾಗಿವೆ.

ಮಳೆಯಿಂದಾಗಿ ಬೀಳಗಿ ಪಟ್ಟಣದ 1, ಕೊರ್ತಿ ಆರ್ಸಿಯಲ್ಲಿ 1 ಹಾಗೂ ಅರಕೇರಿಯಲ್ಲಿ 1 ಮನೆಗಳು ಬಿದ್ದಿವೆ.ಸುನಗ ಗ್ರಾಮದಲ್ಲಿ1.2 ಎಕರೆಯಷ್ಟು ಬಾಳೆ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ತಿಳಿಸಿದರು.

ಬಿರುಗಾಳಿ ,ಮಳೆಗೆ ಅಪಾರ ಹಾನಿ ಸಂಭವಿಸಿದ್ದು ತಾಲ್ಲೂಕಿನ ಹಲವೆಡೆ ಮರಗಳ ಕೊಂಬೆಗಳು ಮುರಿದು ರಸ್ತೆ, ಕಟ್ಟಡ ಹಾಗೂ ವಾಹನಗಳ ಮೇಲೆ ಬಿದ್ದು ಗುರುವಾರ ರಾತ್ರಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಪೊಲೀಸ್ ಇಲಾಖೆಯ ಕಾರ್ಯಾಚರಣೆಯಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಲ್ಲೂಕಿನಲ್ಲಿ ಒಟ್ಟು 200ಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳು ಬಿರುಗಾಳಿಗೆ ಮುರಿದು ಬಿದ್ದಿದ್ದು,ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬೀಳಗಿ ಹೆಸ್ಕಾ ಇಇ ಮಂಜುನಾಥ ಬೋಕಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-19-462199358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.