ಮಂಜುನಾಥ ದೊಡಮನಿ

ಯಡ್ರಾಮಿ: ತಾಲ್ಲೂಕಿನ ಬಿಳವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮಖಂಡಿ ಗ್ರಾಮವು ಮೂಲಸೌಕರ್ಯಗಳಿಂದ ಮರಿಚಿಕೆಯಾಗಿದ್ದು, ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 300 ರಿಂದ 500 ಮನೆಗಳು, 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ, ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿರುವ ಗ್ರಾಮದಲ್ಲಿ ಸಮಸ್ಯೆಗಳು ಕಾಡುತ್ತಿವೆ.

ಗ್ರಾಮದಲ್ಲಿ ಒಂದು ಸಾರ್ವಜನಿಕ ಶೌಚಾಲಯವಿದೆ ಅದು ಬಳಕೆಗೆ ಬಾರದಂತಾಗಿದೆ. ವಾರದಲ್ಲಿ ಎರಡು ಬಾರಿ ಮಾತ್ರ ನೀರು ಬಿಡುವುದರಿಂದ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗಿದೆ. ಗ್ರಾಮಸ್ಥರು ನೀರಿಗಾಗಿ ಸುತ್ತಲಿನ ಹೊಲದಲ್ಲಿ ಕೆರೆ, ಬಾವಿ ಹುಡುಕಿಕೊಂಡು ಹೋಗಿ ನೀರು ತುಂಬಿಕೊಂಡು ಬರುವಂತಾಗಿದೆ.

ಗ್ರಾಮದಲ್ಲಿ ಸಿಸಿ ರಸ್ತೆ ಹದಗೆಟ್ಟಿದ್ದು ಬೈಕ್ ಪ್ರಯಾಣಿಕರು ಸ್ಕಿಡ್ ಆಗಿ ಬೀಳುವುದು ಸಾಮಾನ್ಯವಾಗಿದೆ. ರಸ್ತೆ ಪಕ್ಕದಲ್ಲಿ ಒಳಚರಂಡಿ ಇಲ್ಲದ ಕಾರಣ ಚರಂಡಿ ನೀರು ರಸ್ತೆ ಮಳೆ ಹರಿದು ಹೊಗುತ್ತದೆ. ಚರಂಡಿ ನೀರಿನಲ್ಲೆ ಪಾದಚಾರಿಗಳು ಓಡಾಡುತ್ತಾರೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ.

ಗ್ರಾಮಕ್ಕೆ ಎರಡು ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರಸ್ತೆ ಹದಗೆಟ್ಟಿರುವ ಕಾರಣ ಈಗ ಒಂದೇ ಬಸ್ ಬಂದು ಹೋಗುತ್ತದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಜಮಖಂಡಿ ಮತ್ತು ಹಾಗಣೆಗೇರಾ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಇದರಿಂದ ಗ್ರಾಮದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜಮಖಂಡಿ–ಪಡದಹಳ್ಳಿ ನಾಲ್ಕು ಕಿಮೀ ರಸ್ತೆ ಹದಗೆಟ್ಟಿದ್ದು ಇದರಿಂದ ಬಸ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಜಮಖಂಡಿಯಿಂದ–ಜಮಖಂಡಿಲಾಂಡ್ ಹೋಗುವ ಒಂದು ಕಿಮೀ ರಸ್ತೆಯಲ್ಲಿಯೂ ಗುಂಡಿಗಳು ಬಿದ್ದಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಜಮಖಂಡಿಯಿಂದ ಮದ್ರಿಕಿವರೆಗಿನ 7 ಕಿಮೀ ರಸ್ತೆ, ಜಮಖಂಡಿಯಿಂದ ಬಿಳವಾರದವರೆಗಿನ 5 ಕಿಮೀ ರಸ್ತೆ, ಜಮಖಂಡಿಯಿಂದ ನೇರಡಗಿ, ಮಾರಡಗಿ 5ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎನ್ನುತ್ತಾರೆ ಗ್ರಾಮದ ಸಿದ್ರಾಮ, ಬೀರಪ್ಪ ಪೂಜಾರಿ, ಆನಂದ, ಮಹಾಂತೇಶ ರಾಠೋಡ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-31-230911693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.