ರಬಕವಿ ಬನಹಟ್ಟಿ: ಇಲ್ಲಿನ ಲಕ್ಷ್ಮಿ ನಗರದಲ್ಲಿರುವ ಖಾಲಿ ನಿವೇಶನಗಳು ತ್ಯಾಜ್ಯ ವಿಲೇವಾರಿ ತಾಣಗಳಾಗಿದ್ದು, ಇದರಿಂದ ಸುತ್ತ ಮುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ತಿರುಗಾಡಲು ಆಗದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದು ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗುತ್ತಿದೆ ಎಂದು ಇಲ್ಲಿಯ ನಿವಾಸಿಗಳು ಆರೋಪಿಸಿದ್ದಾರೆ.

ಖಾಲಿ ನಿವೇಶನಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ವಸ್ತುಗಳು, ಮನೆಯಲ್ಲಿ ಬೇಡವಾಡ ಹಳೆಯ ಬಟ್ಟೆಗಳು, ಕಟ್ಡಡದ ನಿರುಪಯುಕ್ತ ವಸ್ತುಗಳು ಇಲ್ಲಿ ಸಂಗ್ರಹಗೊಂಡಿವೆ. ಜಾನುವಾರು, ನಾಯಿ ಮತ್ತು ಹಂದಿಗಳು ಕಸವನ್ನು ಮತ್ತಷ್ಟು ಹರಡುತ್ತಿವೆ. ನಂತರ ಅವೇ ಮತ್ತೆ ಚರಂಡಿಯನ್ನು ಸೇರುತ್ತಿವೆ. ಇದರಿಂದಾಗಿ ಚರಂಡಿಗಳಲ್ಲಿ ಕೂಡ ತ್ಯಾಜ್ಯ ತುಂಬಿಕೊಂಡಿವೆ. ಆದ್ದರಿಂದ ಸಂಬಂಧಪಟ್ಟ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಿಗೆ ಬೌಂಡರಿಗಳನ್ನು ನಿರ್ಮಾಣ ಮಾಡಿ ಸ್ವಚ್ಛವಾಗಿಟ್ಟುಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಲಕ್ಷ್ಮಿ ನಗರದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳು ಸಹಕರಿಸಬೇಕು ಎಂದು ಶಶಿಕಾಂತ ಹುನ್ನೂರ, ವಿಶ್ವನಾಥ ಜಾಡಗೌಡ, ಬಿ. ನಾಗರಾಜ, ಬಿ.ಆರ್. ಗೊಡ್ಡಾಳೆ, ರಾಜು ಕಾಡದೇವರ, ರಮೇಶ ಮಂಡಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

ತ್ಯಾಜ್ಯ ಸಂಗ್ರಹವಾಗಿರುವ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಲಕ್ಷ್ಮಿ ನಗರದ ನಿವಾಸಿಗಳು ಮನೆಯ ತ್ಯಾಜ್ಯವನ್ನು ನಗರಸಭೆಯ ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು

–ಜಗದೀಶ ಈಟಿ ಪೌರಾಯುಕ್ತ ನಗರಸಭೆ ರಬಕವಿ ಬನಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.