ಬಲದಂಡೆ ಕಾಲುವೆಗೆ ನೀರು ಹರಿಸಿ: ಬಾದಾಮಿ ತಾಲ್ಲೂಕಿನ ರೈತರ ಆಗ್ರಹ

7
ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ

ಬಲದಂಡೆ ಕಾಲುವೆಗೆ ನೀರು ಹರಿಸಿ: ಬಾದಾಮಿ ತಾಲ್ಲೂಕಿನ ರೈತರ ಆಗ್ರಹ

Published:
Updated:
Deccan Herald

ಬಾಗಲಕೋಟೆ: ’ಕಳೆದ 18 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಕಾಲುವೆಯಲ್ಲಿ ನೀರಿನ ಪಸೆ ಕಂಡಿದೆ. ಉಳಿದ ಸಂದರ್ಭ ನೀರು ಮರೀಚಿಕೆಯೇ ಆಗಿದೆ. ಶಾಸಕ ಸಿದ್ದರಾಮಯ್ಯ ಅವರಾದರೂ ನಮ್ಮ ನೆರವಿಗೆ ಬರಲಿ’ ಎಂಬುದು ಬಾದಾಮಿ ತಾಲ್ಲೂಕಿನ ಘಟಪ್ರಭಾ ಎಡದಂಡೆ ನಾಲೆ ವ್ಯಾಪ್ತಿಯ ರೈತರ ಅಳಲು..

ತಾಲ್ಲೂಕಿನ ಕೆರಕಲಮಟ್ಟಿ, ಗಂಗನಬೂದಿಹಾಳ, ಬಂದಕೇರಿ, ಹೂಲಗೇರಿ, ಕಗಲಗೊಂಬ, ಸೂಳಿಕೇರಿ, ಕಟಗೇರಿ, ಜಲಗೇರಿ ಗ್ರಾಮಗಳ ರೈತರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ದುಮ್ಮಾನ ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಕೃಷ್ಣಗೌಡ ನಾಡಗೌಡ್ರ, ’ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ. ನಮ್ಮ ಭಾಗಕ್ಕೆ ಬರಬೇಕಾದ ನೀರಿನ ಪ್ರಮಾಣವೆಷ್ಟು. ನೀರು ಬಾರದಿರುವುದಕ್ಕೆ ಕಾರಣವೇನು ಹಾಗೂ ಕಾಲುವೆಯಲ್ಲಿ ನೀರು ಹರಿಯಬೇಕಾದ ಕಾಲಾವಧಿ ಯಾವುದು ಎಂದು ಅಧಿಕಾರಿಗಳನ್ನು ಕೇಳಿದರೆ ಯಾರೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಈ ವರ್ಷ ಹಿಡಕಲ್ ಜಲಾಶಯ ಅವಧಿಗೆ ಮುನ್ನವೇ ತುಂಬಿದೆ. ಕಾಲುವೆಯ ಮೇಲ್ಭಾಗದ ಜಮೀನುಗಳಿಗೆ ನೀರು ಹರಿಯುತ್ತಿದೆ. ಆದರೆ ನಮ್ಮ ಭಾಗಕ್ಕೆ ಹರಿಯುತ್ತಿಲ್ಲ. ತಮಗೆ ನೀರು ಕಡಿಮೆಯಾಗಲಿದೆ ಎಂದು ಮೇಲಿನ ಭಾಗದ ರೈತರು ಕಾಲುವೆಗೆ ಅಡ್ಡಲಾಗಿ ಮಣ್ಣು–ಕಲ್ಲುಗಳನ್ನು ತುಂಬಿದ್ದಾರೆ. ಇದೂ ಕೂಡ ಕೊನೆಯ ಭಾಗಕ್ಕೆ ನೀರು ಹರಿಯದಿರಲು ಮುಖ್ಯ ಕಾರಣವಾಗಿದೆ. ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

‌ಬಾದಾಮಿ ತಾಲ್ಲೂಕಿನಲ್ಲಿ ಸಂಪೂರ್ಣ ಒಣಬೇಸಾಯ ಇದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ನಿರೀಕ್ಷೆಯಷ್ಟು ಮಳೆ ಆಗಿಲ್ಲ. ಜನ–ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಹೊಲಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗದೇ ಜನ ಗುಳೇ ಹೊರಟಿದ್ದಾರೆ. ಕಾಲುವೆಗೆ ನೀರು ಹರಿಸಿದಲ್ಲಿ ನಾವು ಬದುಕಲು ನೆರವಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತರಾದ ಶಿವು ಕಬಾಡದ, ಶ್ರೀಕಾಂತ, ಹನಮಂತ ಪಾಟೀಲ, ಸಿದ್ದಣ್ಣ ಅಂಗಡಿ, ಶಿವು ಅಂಗಡಿ ಮತ್ತಿತರರು ಇದ್ದರು.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !