ಬುಧವಾರ, ಫೆಬ್ರವರಿ 26, 2020
19 °C

ಈಗ ಗೆದ್ದವರು, ಹಿಂದೆ ಇದ್ದವರು ಹಾಲು–ಜೇನಿನಂತಿದ್ದೇವೆ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ‘ಸಚಿವ ಸ್ಥಾನ ನೀಡಿಕೆ ವಿಚಾರದಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಯಾವುದೇ ತಿಕ್ಕಾಟವಿಲ್ಲ. ಇದೆಲ್ಲಾ ಊಹಾಪೋಹ ಹಾಗೂ ಮಾಧ್ಯಮಗಳ ಸೃಷ್ಟಿ. ಈಗ ಗೆದ್ದವರು, ಹಿಂದೆ ಇದ್ದವರು ಎಲ್ಲರೂ ಹಾಲು–ಜೇನಿನಂತೆ ಇದ್ದೇವೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ತಾಲ್ಲೂಕಿನ ತುಳಸಿಗೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಪುಟ ಸಭೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಗೈರು ಹಾಜರಿಯನ್ನು ಅನ್ಯಥಾ ಭಾವಿಸುವ ಅಗತ್ಯವಿಲ್ಲ. ನಾನೂ ಸಭೆಗೆ ಹೋಗಿರಲಿಲ್ಲ. ಯಾರ್ಯಾರು ಸಂಪುಟ ಸಭೆಗೆ ಗೈರು ಆದರೂ ಅವರು ಮೊದಲೇ ಅನುಮತಿ ಪಡೆದಿರುತ್ತಾರೆ’ ಎಂದು ಹೇಳಿದರು.

‘ಯಾವುದೇ ನಿರ್ಣಯಗಳು ರಸ್ತೆಯಲ್ಲಿ ಆಗುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಎಲ್ಲ ನಿರ್ಧಾರಗಳು ದೆಹಲಿಯಲ್ಲಿ ಕೇಂದ್ರ ಮಟ್ಟದಲ್ಲಿ ಆಗುತ್ತವೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಚುನಾವಣೆ ಇದೆ. ರಾಷ್ಟ್ರೀಯ ನಾಯಕರು ಅದರಲ್ಲಿ ತೊಡಗಿಕೊಂಡಿದ್ದಾರೆ. ಅವರು ಸಮಯ ಕೊಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿಕೊಂಡು ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು