ಭಾನುವಾರ, ಅಕ್ಟೋಬರ್ 25, 2020
27 °C

ಕೊರೊನಾ ಗೆದ್ದು ಮನೆಗೆ ಮರಳಿದ ಮಹಿಳೆಗೆ ಹೂ ಮಳೆಯ ಸ್ವಾಗತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ ಮಹಿಳೆಗೆ ಮುಧೋಳ ತಾಲ್ಲೂಕಿನ ಲೋಕಾಪುರರ ವೆಂಕಟೇಶ್ವರ ಕಾಲೊನಿ ನಿವಾಸಿಗಳು ಗುರುವಾರ ಅದ್ದೂರಿಯಾಗಿ ಸ್ವಾಗತಿಸಿದರು. 

ಕೊರೊನಾ ಪಾಸಿಟಿವ್ ಆಗಿ 55 ವರ್ಷದ ಮಹಿಳೆ ಜುಲೈ 16 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ಮಹಿಳೆ ಮನೆಗೆ ಮರಳಿದಾಗ ಆಕೆಗೆ ಆರತಿ ಎತ್ತಿ, ಕುಂಕುಮ ಇಟ್ಟು ಸ್ವಾಗತಿಸಿದ ಅಕ್ಕಪಕ್ಕದ ಮನೆಯವರು ಹೂ ಮಳೆಗೆರೆದು ಶುಭ ಕೋರಿದರು.

ಈ ವೇಳೆ ಓಣಿಯ ಹಿರಿಯರಿಗೆ ನಮಸ್ಕರಿಸುವ ಮಹಿಳೆ ಮನೆಯ ಗೇಟ್ ಒಳಗೆ ತೆರಳುವ ಮುನ್ನ ನೆಲ ಮುಟ್ಟಿ ನಮಿಸುತ್ತಾರೆ.

ಮಹಿಳೆ ಬರುವ ಮುನ್ನ ಮನೆ ಅಂಗಳದಲ್ಲಿ ರಂಗೋಲಿಯ ಚಿತ್ತಾರ ಮೂಡಿಸುವ ಸ್ಥಳೀಯರು ಗೇಟ್ ಗೆ ಬಣ್ಣ ಬಣ್ಣದ ಬಲೂನ್ ಗಳನ್ನು ಕಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು