ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ಇಲಾಖೆಯೋ ಸಾವಿನ ಕುಣಿಕೆಯೋ’ : 3 ವರ್ಷ: 44,630 ನವಜಾತ ಶಿಶುಗಳ ಸಾವು

Last Updated 26 ಏಪ್ರಿಲ್ 2018, 17:41 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 21,370 ಹುದ್ದೆಗಳು ಖಾಲಿ ಇವೆ. ಮೂರು ವರ್ಷಗಳಲ್ಲಿ 44,630 ನವಜಾತ ಶಿಶುಗಳು ಮರಣ ಹೊಂದಿವೆ. ನಾಲ್ಕು ವರ್ಷಗಳಲ್ಲಿ 2,433 ಗರ್ಭಿಣಿಯರು ಮೃತಪಟ್ಟಿದ್ದಾರೆ.

ಬಿಜೆಪಿಯ ವೈದ್ಯಕೀಯ ಪ್ರಕೋಷ್ಠ ಸಿದ್ಧಪಡಿಸಿರುವ ‘ಆರೋಗ್ಯ ಇಲಾಖೆಯೋ ಸಾವಿನ ಕುಣಿಕೆಯೋ’ ಸಮೀಕ್ಷಾ ವರದಿಯಲ್ಲಿರುವ ಪ್ರಮುಖ ಅಂಶಗಳು ಇವು. ಪಕ್ಷದ ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್‌, ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಿದರು.

‘ಅವಧಿಪೂರ್ವ ಜನನದ ಸಮಯದಲ್ಲಿ ಕಡಿಮೆ ತೂಕ, ನ್ಯುಮೋನಿಯಾ, ಗರ್ಭಕೋಶದೊಳಗೆ ಆಮ್ಲಜನಕದ ಕೊರತೆ ಹಾಗೂ ಜನನದ ಸಮಯದಲ್ಲಿ ಉಸಿರಾಟದ ಕೊರತೆ, ಅತಿಸಾರ ರೋಗ ಶಿಶು ಮರಣಕ್ಕೆ ಕಾರಣ. ಜತೆಗೆ, ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಕಾಂಗ್ರೆಸ್‌ ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ’ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ರಾಜ್ಯದ ಶೇ 50ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್‌ ವ್ಯವಸ್ಥೆ ಇಲ್ಲದಿರುವ ಕಾರಣ ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿಯರು ಸಾಯು
ತ್ತಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಔಷಧ ಖರೀದಿಗೆ ₹ 700 ಕೋಟಿ ವಿನಿಯೋಗಿಸಿದೆ. ಆದರೂ, ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಚೀಟಿ ಕೊಡುವುದು ನಿಂತಿಲ್ಲ. ಉಪಕರಣಗಳ ಖರೀದಿಗೆ ₹142.63 ಕೋಟಿ ಬಳಸಿದೆ. ಆದರೂ, ಲ್ಯಾಬ್‌ ಹಾಗೂ ಸ್ಕ್ಯಾನಿಂಗ್‌ಗೆ ಖಾಸಗಿ ಆಸ್ಪತ್ರೆಗೆ ಚೀಟಿ ಕೊಡುವುದು ಮುಂದುವರಿದಿದೆ’ ಎಂದು ಹೇಳಲಾಗಿದೆ.

ಮುರಳೀಧರ ರಾವ್‌ ಮಾತನಾಡಿ, ‘ಸಿದ್ದರಾಮಯ್ಯ ಅವರು ಅಭಿವೃದ್ಧಿ ವಿಷಯದ ಬಗ್ಗೆ ಮಾತನಾಡುತ್ತಿಲ್ಲ. ಜನರ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಮೋದಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ವ್ಯತ್ಯಾಸ’ ಎಂದರು.

ವರದಿಯಲ್ಲಿನ ಅಂಶಗಳು:

l ಕುಟುಂಬ ನಿಯಂತ್ರಣ ಯೋಜನೆ ಯಲ್ಲಿ ಸರ್ಕಾರದ ಸಾಧನೆ ಶೇ 63 ಮಾತ್ರ.

l ಕರುಳು ಬೇನೆಯಿಂದ 2013ರಿಂದ 17ರವರೆಗೆ 5.37 ಲಕ್ಷ ಜನ ಬಸವಳಿದಿದ್ದಾರೆ ಹಾಗೂ 70 ಮಂದಿ ಸತ್ತಿದ್ದಾರೆ.

l ಐದು ವರ್ಷಗಳಲ್ಲಿ ಟೈಫಾಯ್ಡ್‌ನಿಂದ 2.77 ಲಕ್ಷ ಜನ ಸೊರಗಿದ್ದಾರೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ.

l ಐದು ವರ್ಷಗಳಲ್ಲಿ 278 ಮಂದಿಗೆ ಮಂಗನ ಕಾಯಿಲೆ ಬಂದಿದೆ. ಈ ಪೈಕಿ ಮೂವರು ಸತ್ತಿದ್ದಾರೆ.

l 1,504 ಮಂದಿಗೆ ಇಲಿ ಜ್ವರ ಬಂದಿದ್ದು, 18 ವ್ಯಕ್ತಿಗಳು ಮೃತಪಟ್ಟಿದ್ದಾರೆ.

l ಎಚ್1ಎನ್‌1ನಿಂದ 5,719 ಮಂದಿ ಬಳಲಿದ್ದು, 160 ರೋಗಿಗಳು ಅಸುನೀಗಿದ್ದಾರೆ.

l ಐದು ವರ್ಷಗಳಲ್ಲಿ 10.17 ಲಕ್ಷ ವ್ಯಕ್ತಿಗಳು ನಾಯಿ ಕಡಿತಕ್ಕೆ ಒಳಗಾಗಿದ್ದು, 41 ಮಂದಿ ಸತ್ತಿದ್ದಾರೆ.

l 43,035 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದು, 439 ಮಂದಿ ಮರಣ ಹೊಂದಿದ್ದಾರೆ.

l 15ರಿಂದ 49 ವರ್ಷದೊಳಗಿನ ಶೇ 43 ಮಹಿಳೆಯರಿಗೆ ರಕ್ತಹೀನತೆ ಇದೆ.

l ಶೇ 36.2 ಮಕ್ಕಳು ಬೆಳವಣಿಗೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

l ರಾಜ್ಯದ ಶೇ 7.1 ಜನರಿಗೆ ರಕ್ತದೊತ್ತಡದ ಸಮಸ್ಯೆ ಇದೆ. 40 ಲಕ್ಷ ಜನರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT