ಶುಕ್ರವಾರ, ಡಿಸೆಂಬರ್ 4, 2020
23 °C
100 ಹಾಸಿಗೆಯ ಆಸ್ಪತ್ರೆ: 15 ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣ

ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣ

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ನಗರದ ಕೇಂದ್ರ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಧುನಿಕ ಸೌಲಭ್ಯಗಳುಳ್ಳ 100 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಘಟಕ ಮತ್ತು ಸಿಬ್ಬಂದಿ ವಸತಿ ಗೃಹ ಕಟ್ಟಡ ನಿರ್ಮಾಣಕ್ಕೆ ನ.25ರಂದು ಭೂಮಿ ಪೂಜೆ ನೆರವೇರಲಿದೆ.

ಪೆಬ್ರುವರಿ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಒಂದು ವರ್ಷ ಮೂರು ತಿಂಗಳಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ₹20 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಹೊಸ ಕಟ್ಟಡದಲ್ಲಿ ಮೂರು ಮಹಡಿಗಳಿರಲಿವೆ. ವೈದ್ಯರ, ದಾದಿಯರ, ಡಿ-ದರ್ಜೆ ನೌಕರರ ನಿವಾಸಗಳು, ಸೆಪ್ಟಿಕ್ ಟ್ಯಾಂಕ್, ಬಿಸಿ ನೀರಿಗಾಗಿ  12 ಸೋಲಾರ್ ಫಲಕಗಳು, ಮಾಡ್ಯುಲರ್ ಶಸ್ತ್ರ ಚಿಕಿತ್ಸಾ ಕೋಣೆ, ಲಿಫ್ಟ್‌, ಆಂತರಿಕ ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಮಾಡಲಾಗುತ್ತದೆ.

ಸೌಲಭ್ಯಗಳು: ರೇಡಿಯೋಲಜಿ ಬ್ಲಾಕ್, ಲ್ಯಾಬೋರೇಟರಿ, ಕೌನ್ಸೆಲಿಂಗ್‌ ಕೋಣೆಗಳು, ಟ್ರೀಟ್‌ಮೆಂಟ್‌ ರೂಮ್, ಲಘು ಶಸ್ತ್ರ ಚಿಕಿತ್ಸಾ ವಿಭಾಗ, ಅಟೋಕ್ಲೇವ್, ಸ್ಪೇಷಲ್ ವಾರ್ಡ್‌ಗಳು, ಹೆರಿಗೆ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಇರಲಿದೆ.

ಮೊದಲನೇ ಮಹಡಿ: ಆಶಾ ಗೃಹ, ಮೀಟಿಂಗ್ ಹಾಲ್, ವೈದ್ಯಾಧಿಕಾರಿಗಳ ಕೋಣೆ, ಇಮ್ಯೂನೈಸೇಷನ್ ಮತ್ತು ಮಕ್ಕಳ ವಿಭಾಗ, ಕೌನ್ಸೆಲಿಂಗ್ ಕೊಠಡಿ, ಟ್ರಿಟ್ಮೆಂಟ್ ರೂಮ್, ಲಘು ಶಸ್ತ್ರ ಚಿಕಿತ್ಸೆ, ಐಇಸಿ ವಸ್ತುಗಳ ಸಂಗ್ರಹಣೆ ಕೋಣೆ. ಎರಡನೇ ಮಹಡಿಯಲ್ಲಿ ಗ್ರಂಥಾಲಯ, ಸೆಮಿನಾರ ಹಾಲ್, ಸ್ಕಿಲ್ ಸ್ಟೇಷನ್ ನಿರ್ಮಾಣವಾಗಲಿದೆ.

ಭೂಮಿ ಪೂಜೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಮುತ್ತಿನಕಂತಿ ಮಠದ ಶಿವಲಿಂಗ ಸ್ವಾಮೀಜಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಿಲಾನ್ಯಾಸ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ, ಅಧ್ಯಕ್ಷತೆ ಶಾಸಕ ಆನಂದ ನ್ಯಾಮಗೌಡ ವಹಿಸಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು