ಮುಧೋಳ: ‘ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ಸಾಧಿಸಿ ತೋರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ರನ್ನ ಭವನದಲ್ಲಿ ಸಪ್ತಸ್ವರ ಸಂಗೀತ ಮತ್ತು ನೃತ್ಯ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ‘ನೃತ್ಯ ಸಂಗಮ’ ಹಾಗೂ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರಿಗೆ ಅಂಬೇಡ್ಕರ್ ಅವರು ಅಂದೇ ಸಮಾನ ಹಕ್ಕಿನ ಶಕ್ತಿ ನೀಡಿದ್ದರು. ಸರ್ಕಾರದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿವೆ. ಇಂದಿರಾ ಗಾಂಧಿ, ಮಮತಾ ಬ್ಯಾನರ್ಜಿ ಅವರಂತಹ ದಿಟ್ಟ ನಾಯಕಿಯರನ್ನು ಸ್ಫೂರ್ತಿಯಾಗಿ ಪಡೆಯಬೇಕು’ ಎಂದು ಹೇಳಿದ ಅವರು, ಸಂಸ್ಥೆಯ ಕಟ್ಟಡಕ್ಕೆ ಜಾಗ ನೀಡುವ ಭರವಸೆ ನೀಡಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಮಹಿಳೆಯನ್ನು ಅವಮಾನಿಸುವ ಯಾವುದೇ ಪುಣ್ಯ ಕಾರ್ಯಗಳು ನಿಷ್ಫಲ. ಆರ್ಥಿಕವಾಗಿ ಸಮೃದ್ಧವಾಗಿರುವ ಮುಧೋಳದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಒಬ್ಬ ಮಹಿಳೆ ಸಬಲಳಾದರೆ ಇಡೀ ಕುಟುಂಬ ಹಾಗೂ ದೇಶವೇ ಸಬಲವಾಗುತ್ತದೆ’ ಎಂದು ಹೇಳಿದರು.

ಕಲಾವಿದರಾದ ರುಜುತಾ ಸೋಮನ್, ಪ್ರಚಿತಿ ಡಾಂಗೆ ಮತ್ತಿತರರು ಕಥಕ್, ಒಡಿಸ್ಸಿ ಮತ್ತು ಭರತನಾಟ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ಡಾ. ರಾಜೇಶ ತಲಾಠಿ, ಡಾ. ಉದಯ ನಾಯಿಕ , ಶಶಿಕಲಾ ಆರ್. ತಿಮ್ಮಾಪೂರ, ಡಾ. ಗಿರಿಜಾ ಹೊಸೂರು, ಸವಿತಾ ಅರಳಿಕಟ್ಟಿ, ಬಸವರಾಜ ಕೊಣ್ಣೂರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಿರ್ಮಲಾ ಮಲಘಾಣ, ಕಮಲಾ ಕುಬಸದ, ಸವಿತಾ ಅರಳಿಕಟ್ಟಿ ಮಾಲಾ ಪಾಟೀಲ, ತಿಮ್ಮಣ್ಣ ಅರಳಿಕಟ್ಟಿ, ಡಾ. ಶಿವಾನಂದ ಕುಬಸದ, ಪ್ರಕಾಶ ವಸ್ತ್ರದ, ಸದುಗೌಡ ಪಾಟೀಲ ಇದ್ದರು.

ಪ್ರಾಂಜಲಿ ತಲಾಠಿ ಹಾಗೂ ವಿಭಾ ಕೊಲ್ದಾರ ಸ್ವಾಗತಿಸಿದರು, ಅನಿತಾ ಪಾಟೀಲ, ಡಾ.ತ್ರಿವೇಣಿ ಮಲಘಾಣ, ಅಮೂಲ್ಯ ಪಾಟಿಲ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.