ಕೊಟ್ಟೂರು: ‘ತಾಲ್ಲೂಕಿನ ಹತ್ತು ಗ್ರಾಮಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಒಕ್ಕಲು ಮಾಡಿಕೊಳ್ಳಲು ಕೃಷಿ ಕಣ ನಿರ್ಮಾಣಕ್ಕೆ ₹30 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ ತಿಳಿಸಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2025–26ನೇ ಸಾಲಿನ ಸಾಮಾನ್ಯ ನಿಧಿ, ಮುಂಗಡ ಪತ್ರದ ಅನುಮೋದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರೈತರ ಹಿತದೃಷ್ಟಿಯಿಂದ ಎಪಿಎಂಸಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿಸಲಾಗುವುದು. ಮಾದರಿ ಮಾರುಕಟ್ಟೆಯನ್ನಾಗಿಸಲು ಆಡಳಿತ ಮಂಡಳಿ ಶ್ರಮಿಸುತ್ತದೆ’ ಎಂದು ಭರವಸೆ ನೀಡಿದರು.

ಕಾರ್ಯದರ್ಶಿ ಎ.ಕೆ. ವೀರಣ್ಣ, ಪರವಾನಗಿ ಶುಲ್ಕ, ಮಾರುಕಟ್ಟೆ ಶುಲ್ಕ ಹಾಗೂ ಇತರೆ ಆದಾಯ ಮೂಲಗಳಿಂದ ಒಟ್ಟು ₹2.45 ಕೋಟಿ ಅಂದಾಜು ಆದಾಯ, ರಾಜ್ಯ ಕೃಷಿ ಮಾರಾಟ ಮಂಡಳಿಗೆ ವಂತಿಕೆ ಹಾಗೂ ಆವರ್ತ ನಿಧಿಗೆ ವಂತಿಕೆ ಸೇರಿದಂತೆ ಇತರೆ ವೆಚ್ಚಗಳಿಗೆ ಒಟ್ಟು ₹1.44 ಕೋಟಿ ವೆಚ್ಚದ ವರದಿ ಸಲ್ಲಿಸಿದರು. ಅಂದಾಜು ₹27 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು.

ಉಪಾಧ್ಯಕ್ಷ ಎಂ. ಶಿವಣ್ಣ, ನಿರ್ದೇಶಕರಾದ ಕೆ. ಶಿವಕುಮಾರಗೌಡ, ಎಚ್.ಕೆ. ಕಲ್ಲೇಶಣ್ಣ, ಚಿರಿಬಿ ಕೊಟ್ರೇಶ್, ಬೇವೂರ ದೇವಪ್ಪ, ನಾಗರತ್ನಮ್ಮ, ಟಿ.ಎನ್. ಜ್ಯೋತಿಲಕ್ಷ್ಮಿ, ಬಸಮ್ಮ, ಎಲ್. ನಾಗರಾಜ್, ಎಂ.ಓ. ಕೊಟ್ರಯ್ಯ, ಎಚ್. ಶಂಕ್ರಪ್ಪ, ಎಂ.ವೀರೇಶ್, ಕಲ್ಲನಗೌಡ, ಬಿ. ಶಿವಲಿಂಗಪ್ಪ, ಎಂ. ಶಾಂತನಗೌಡ, ಎಸ್. ಕೊಡದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.