ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ : 27ನೇ ವಯಸ್ಸಿಗೆ ₹9.07 ಕೋಟಿ ಆಸ್ತಿ

ರಕ್ಷಣೆಗೆ ಸಿದ್ದಾರ್ಥ ಸಿಂಗ್‌ ಬಳಿ ರಿವಾಲ್ವರ್‌, ಡಬಲ್‌ ಬ್ಯಾರಲ್‌ ಗನ್‌
Last Updated 20 ಏಪ್ರಿಲ್ 2023, 8:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌ ಅವರಿಗೆ ಈಗ 27 ವರ್ಷ ವಯಸ್ಸು. ಆದರೆ, ಕಿರಿಯ ವಯಸ್ಸಿನಲ್ಲೇ ₹9.07 ಕೋಟಿ ಆಸ್ತಿ ಗಳಿಸಿದ್ದಾರೆ. ಇಷ್ಟೇ ಅಲ್ಲ, ರಕ್ಷಣೆಗೆ ತಲಾ ಒಂದು ರಿವಾಲ್ವರ್‌, ಡಬಲ್‌ ಬ್ಯಾರಲ್‌ ಗನ್‌ ಇಟ್ಟುಕೊಂಡಿದ್ದಾರೆ. ಆದರೆ, ಇವರ ಬಳಿ ಸ್ವಂತ ಕಾರು, ಮನೆ ಇಲ್ಲ!

ವಿಧಾನಸಭಾ ಚುನಾವಣೆಗೆ ನಗರದಲ್ಲಿ ಬುಧವಾರ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಬಿಬಿಎ, ಕಾನೂನು ಪದವಿ ಪಡೆದಿರುವ ಇವರು 2021–22ನೇ ಸಾಲಿನಲ್ಲಿ ₹11.96 ಲಕ್ಷ ಆದಾಯ ತೆರಿಗೆ ಸಲ್ಲಿಸಿದ್ದಾರೆ. ಆದರೆ, 2020–21ನೇ ಸಾಲಿನಲ್ಲಿ ₹1.03 ಕೋಟಿ ಆದಾಯ ತೆರಿಗೆ ವಿವರ ಸಲ್ಲಿಸಿದ್ದರು. ಒಂದೇ ವರ್ಷದಲ್ಲಿ ಆದಾಯ ದಿಢೀರ್‌ ಕುಸಿದಿದೆ. ಇವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ.

ಸಿದ್ದಾರ್ಥ ಬಳಿ ಸದ್ಯ ₹6.52 ಲಕ್ಷ ಹಾಗೂ ಅವರ ಪತ್ನಿ ಸಂಜನಾ ಸಬರದ ಬಳಿ ₹10 ಸಾವಿರ ನಗದು ಹಣವಿದೆ. ವಿವಿಧ ಬ್ಯಾಂಕುಗಳಲ್ಲಿ ₹37.86 ಲಕ್ಷ, ಪತ್ನಿ ಖಾತೆಯಲ್ಲಿ ₹2.87 ಲಕ್ಷ ಠೇವಣಿ ಇದೆ. ವೈಷ್ಣವಿ ಆನಂದ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ₹2 ಕೋಟಿ ಷೇರು ಹೊಂದಿದ್ದಾರೆ. ಸಿದ್ದಾರ್ಥ ಹೆಸರಲ್ಲಿ ₹16.55 ಲಕ್ಷ, ಪತ್ನಿ ಹೆಸರಲ್ಲಿ ₹15 ಲಕ್ಷ ಕಿಸಾನ್‌ ವಿಕಾಸ ಪತ್ರಗಳಿವೆ. ₹87 ಲಕ್ಷ ಮೌಲ್ಯದ ಚಿನ್ನಾಭರಣ, ₹71 ಲಕ್ಷದ ಆರೋಗ್ಯ ವಿಮೆ, ವಿವಿಧ ಬ್ಯಾಂಕುಗಳ ಖಾತೆಗಳಲ್ಲಿ ₹37 ಲಕ್ಷ ಠೇವಣಿ ಹೊಂದಿದ್ದಾರೆ.

ಸಿದ್ದಾರ್ಥ ಒಟ್ಟು ₹4.29 ಕೋಟಿ, ಪತ್ನಿ ಹೆಸರಲ್ಲಿ ಒಟ್ಟು ₹17.97 ಲಕ್ಷ ಚರ ಆಸ್ತಿ ಇದೆ. ₹2.86 ಲಕ್ಷ ಮೌಲ್ಯದ ಜಾವಾ ಪರ್ಕ್ ಬೈಕ್ ಇದೆ. ಸಿದ್ದಾರ್ಥ ಹೆಸರಲ್ಲಿ ಒಟ್ಟು ₹4.78 ಕೋಟಿ, ಪತ್ನಿ ಹೆಸರಲ್ಲಿ ₹25 ಲಕ್ಷದ ಸ್ಥಿರ ಆಸ್ತಿ ಇದೆ. ಸಿದ್ದಾರ್ಥ ₹3.20 ಕೋಟಿ ಸಾಲ ಪಡೆದರೆ, ಪತ್ನಿ ₹22.75 ಲಕ್ಷ ಸಾಲ ಹೊಂದಿದ್ದಾರೆ. ಸಿದ್ಧಾರ್ಥ ಸಿಂಗ್ ಅವರು ತಾಯಿ ಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ವರಿಗೆ ₹73.21 ಸಾಲ ನೀಡಿದ್ದಾರೆ. ವೈಷ್ಣವಿ ಪ್ರಾಜೆಕ್ಟ್ಸ್‌, ಶ್ರೀನಿವಾಸ ಮಿನರಲ್ಸ್ ಸೇರಿದಂತೆ ಐವರಿಂದ ₹3.20 ಕೋಟಿ ಸಾಲ ಪಡೆದಿದ್ದಾರೆ. ಸಂಜನಾ ಅವರು ಪತಿ ಬಳಿ ₹20 ಲಕ್ಷ, ಅತ್ತೆ ಬಳಿ ₹2.75 ಲಕ್ಷ ಕೈಗಡ ಪಡೆದಿದ್ದಾರೆ.

**

ಹೊಸಪೇಟೆ, ಸಂಡೂರಿನಲ್ಲಿ ಆಸ್ತಿ:

ನಗರದ ರಾಣಿಪೇಟೆಯಲ್ಲಿ ₹1.85 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ, ತಾಲ್ಲೂಕಿನ 88 ಮುದ್ಲಾಪುರ ವಿವಿಧ ಸರ್ವೆ ನಂಬರ್‌ಗಳಲ್ಲಿ 14.49 ಎಕರೆ, ಕಂಪ್ಲಿ ತಾಲ್ಲೂಕಿನ ಶಂಕರ ಸಿಂಗ್ ಕ್ಯಾಂಪ್‌ನಲ್ಲಿ 0.93 ಎಕರೆ ಕೃಷಿ ಭೂಮಿ ಇದೆ. ಅದರ ಮಾರುಕಟ್ಟೆ ಮೌಲ್ಯ ₹1.68 ಕೋಟಿ ಇದೆ. ತಾಲ್ಲೂಕಿನ 88 ಮುದ್ಲಾಪುರದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 27935 ಚದರ ಅಡಿ, ಸಂಡೂರು ತಾಲ್ಲೂಕಿನ ಜೈಸಿಂಗಾಪುರದಲ್ಲಿ 8.67 ಲಕ್ಷ ಚದರ ಅಡಿ, ಎಮ್ಮಿಹಟ್ಟಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 8.58 ಲಕ್ಷ ಚದರ ಅಡಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ₹1.25 ಕೋಟಿ ಇದೆ. ಒಟ್ಟಾರೆ ₹4.78 ಕೋಟಿ ಸ್ಥಿರಾಸ್ಥಿ ಇದೆ. ಪತ್ನಿ ಹೆಸರಲ್ಲಿ ತಾಲ್ಲೂಕಿನ ವೆಂಕಟಾಪುರ ಬಳಿ ₹25 ಲಕ್ಷ ಮೌಲ್ಯದ 1.84 ಎಕರೆ ಕೃಷಿ ಭೂಮಿ, ವಿವಿಧ ಬ್ಯಾಂಕುಗಳ ಜಂಟಿ ಖಾತೆಗಳಲ್ಲಿ ₹2.87 ಲಕ್ಷ ಠೇವಣಿ ಇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT