ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ನದಿಗೆ ಹಾರಿದ ರಾಜಸ್ಥಾನ ಮೂಲದ ಯುವಕ

Published 15 ಆಗಸ್ಟ್ 2024, 15:21 IST
Last Updated 15 ಆಗಸ್ಟ್ 2024, 15:21 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲೂಕಿನ ದೇಶನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತುಂಗಭದ್ರಾನದಿಯ ಸೇತುವೆ ಮೇಲಿಂದ ರಾಜಸ್ಥಾನ ಮೂಲದ ಯುವಕನೊಬ್ಬ ನದಿಗೆ ಹಾರಿದ ಘಟನೆ ಗುರುವಾರ ನಡೆದಿದೆ.

ನದಿಗೆ ಹಾರಿದ ಯುವಕನನ್ನು ಧನ್ಯರಾಮ ಕುಶಾಲ್‌ರಾಮ್(20) ಎಂದು ಗುರುತಿಸಲಾಗಿದೆ.

ನದಿ ದಡದಲ್ಲಿ ಯುವಕನಿಗೆ ಸೇರಿದ ಬೈಕ್ ಪತ್ತೆಯಾಗಿದ್ದು, ಬೈಕ್ ಮೇಲೆ ತಮ್ಮ ಸಂಬಂಧಿಕರ ಮೊಬೈಲ್ ನಂಬರ್‌ ಬರೆದಿಟ್ಟಿರುವುದು ಪತ್ತೆಯಾಗಿದೆ. ಮಧ್ಯಾಹ್ನ 12 ಗಂಟೆಗೆ ಯುವಕ ನದಿಗೆ ಹಾರಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಎಚ್.ವಿಶ್ವನಾಥ್, ಡಿವೈಎಸ್‌ಪಿ ವೆಂಕಟೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನ ಗೌಡ ಪಾಟೀಲ್, ಸಿಪಿಐ ಹನುಮಂತಪ್ಪ, ಪಿಎಸ್ಐ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಗೆ ಸಂಬಂಧಿಸಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನುರಿತ ಈಜುಗಾರರಿಂದ ಕಾರ್ಯಾಚರಣೆ ಆರಂಭವಾಗಿದೆ ಎಂದು ಡಿವೈಎಸ್ಪಿ ವೆಂಕಟೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT