ಹೊಸಪೇಟೆಯಿಂದ ಬೆಂಗಳೂರು ಕಡೆ ಹೊರಡಿದ್ದ ಪಾರ್ಸೆಲ್ ಬ್ಯಾಗಗಳು ತುಂಬಿದ್ದ ಕಂಟೈನರ್ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು ಭಾಗಶಃ ಪಾರ್ಸೆಲ್ ಗಳು ಸುಟ್ಟಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.