ಒಂದು ಕಾಲಕ್ಕೆ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ 170ಕ್ಕೂ ಅಧಿಕ ಹಾಲು ಉತ್ಪಾದಕ ಸಂಘಗಳಿದ್ದವು ಎನ್ನಲಾಗಿದೆ. ಅದು ಇಂದು 92ಕ್ಕೆ ಕುಸಿದಿದೆ. ಇದರಲ್ಲಿ 28ಕ್ಕೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವಿದೆ. ಇನ್ನುಳಿದವು ದಿನಕ್ಕೆ 100 ಲೀಟರ್ ಹಾಲು ಉತ್ಪಾದನೆ ಮಾಡಲೂ ಶಕ್ತವಲ್ಲದೇ ಮತದಾನ ವಂಚಿತವಾಗಿವೆ. ಹಾಲು ಉತ್ಪಾದಕ ಸಂಘಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದರೂ ಅದಕ್ಕೆ ಕಾರಣ ಪರಿಹಾರ ಹುಡುಕುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಯಾವುದೇ ಪ್ರಯತ್ನ ಮಾಡಿದಂತೆ ಇಲ್ಲ. ಇದನ್ನು ಮೊದಲೇ ಗಮನಿಸಿ ಚಿಕಿತ್ಸಕ ಕ್ರಮಗಳನ್ನು ಕೈಗೊಂಡಿದ್ದರೆ ಬಳ್ಳಾರಿಗೆ ಇಂದು ಇಂಥ ದುರ್ಗತಿ ಬರುತ್ತಿರಲಿಲ್ಲ ಎಂಬುದು ತೀರ ಹತ್ತಿರದವರ ಬೇಸರದ ನುಡಿಗಳು.